ಬೆಂಗಳೂರು : ಲೋಕಸಭೆ ಚುನಾವಣೆಗೆ ಸಿದ್ದತೆ ನಡೆಸಿರುವ ಕಾಂಗ್ರೆಸ್ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತದ ಮೂಲಕ ಶಾಸಕರನ್ನು ಸೆಳೆಯುವ ಪ್ರಯತ್ನ ಮುಂದುವರೆಸಿದೆ.
ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ , ಶಿವರಾಮ್ ಹೆಬ್ಬಾರ್ ಸೇರಿದಂತೆ ಕೆಲವು ಶಾಸಕರು ಮತ್ತೆ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.
ಈ ಕುರಿತು ಸುಳಿವು ಅರಿತು ಹೈ ಅಲರ್ಟ್ ಆದ ಬಿಜೆಪಿ ಶಾಸಕರ ಮುನಿಸು ಶಮನಕ್ಕೆ ಶತಪ್ರಯತ್ನ ಆರಂಭಿಸಿದೆ
ಸೋಮಶೇಖರ್ ಅವರಿಗೆ ಸಣ್ಣಪುಟ್ಟ ವಿಚಾರದಲ್ಲಿ ಅಸಮಾಧಾನವಿದೆ. ಆದರೆ ಅದು ಸರಿಪಡಿಸಲಾರದಷ್ಟು, ಪಕ್ಷ ಬಿಡುವಷ್ಟು ದೊಡ್ಡದಲ್ಲ ಎಂದು ಹೇಳಿದ ಬಿಜೆಪಿ ನಾಯಕ ಸಿ.ಟಿ.ರವಿ, ಬಿಬಿಎಂಪಿ, ಸ್ಥಳೀಯ ಚುನಾವಣೆಗಳ ಆಸೆ ತೋರಿಸಿ ಸೋಮಶೇಖರ್ ಬೆಂಬಲಿಗರನ್ನು ಕಾಂಗ್ರೆಸ್ ನಾಯಕರು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆಪರೇಷನ್ ಹಸ್ತದ ಬಗ್ಗೆ ಆಕ್ರೋಶ ಹೊರಹಾಕಿದ ರವಿ ಅವರು, ನಿಮಗೆ ಸ್ಪಷ್ಟ ಬಹುಮತವಿದೆ ಅಂತ ಅತಿಯಾಗಿ ಮಾಡಲು ಹೋಗಬೇಡಿ. ನಾವೇನಾದರೂ ಮಾಡಿದರೆ ನೀವು ಮತ್ತೆ ಮೇಲೆ ಏಳಲು ಆಗುವುದಿಲ್ಲ. ಆಪರೇಷನ್‌ಗೆ ಆಪರೇಷನ್ ಮಾಡಲು ಗೊತ್ತು ಎಂದು ಎಚ್ಚರಿಕೆ ನೀಡಿದ್ದಾರೆ.ತ. ನಾಡಿಗೆ ಮಣಿದು ಕಾವೇರಿ ನೀರು ಹರಿಸಿದ ಸರ್ಕಾರ : ಆ21 ರಂದು ರಾಷ್ಟ್ರೀಯ ಹೆದ್ದಾರಿ ತಡೆಗೆ ಬಿಜೆಪಿ ಸಿದ್ದತೆ
ನಮ್ಮ ಪಕ್ಷ ಉಳಿಸಿಕೊಳ್ಳುವುದು, ಕಟ್ಟುವುದು ನಮಗೆ ಗೊತ್ತಿದೆ. ಪಗಡೆ, ಚೆಸ್ ಏಕಮುಖ ಅಲ್ಲ. ಅವರು ದಾಳ ಉರುಳಿಸಿದರೆ ನಾವೂ ಆಡುತ್ತೇವೆ. ನಾವು ಚೆಕ್ ಮೇಟ್ ಮಾಡಿದರೆ ಸಣ್ಣಪುಟ್ಟ ಸೈನಿಕರಿಗೆ ಮಾಡುವುದಿಲ್ಲ. ನಾವು ರಾಜನಿಗೇ ಚೆಕ್‌ಮೇಟ್ ಮಾಡುತ್ತೇವೆ ಎಂದು ಹೇಳುವ ಮೂಲಕ ಸಿಟಿ ರವಿ ಅವರು ಕಾಂಗ್ರೆಸ್ನ ಪ್ರಬಲ ನಾಯಕರಿಗೆ ಗಾಳ ಹಾಕುವ ಎಚ್ಚರಿಕೆ ನೀಡಿದ್ದಾರೆ
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ