ಹಿಮಾಲಯದ ಪಿರ್ ಪಂಜಾರ್ ಪರ್ವತ ಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ 10,000 ಅಡಿಗಳ ಎತ್ತರಕ್ಕೆ ನಿರ್ಮಿಸಲಾದ ಅಟಲ್ ಸುರಂಗ ಮಾರ್ಗವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು.
ಈ ಸುರಂಗ ಮಾರ್ಗ ಜಗತ್ತಿನ ಅತ್ಯಂತ ಉದ್ದದ ಹೆದ್ದಾರಿ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಇದರ ಉದ್ದ 9.02 ಕಿಮಿ ಇದೆ. ಹಿಮಾಚಲ ಪ್ರದೇಶದ ಮನಾಲಿ ಮತ್ತು ಲೇಹ್ ನಡುವಿನ ಸಂಪರ್ಕ ಹೆದ್ದಾರಿ ಇದಾಗಿದೆ. ಪ್ರಯಾಣದ ಒಟ್ಟು 4 ರಿಂದ 5 ಗಂಟೆಗಳ ಅವಧಿ ಜೊತೆಗೆ ಸುಮಾರು 46 ಕಿಲೋಮೀಟರ್ ಪ್ರಯಾಣವನ್ನು ಈ ಸುರಂಗ ಮಾರ್ಗ ಕಡಿತಗೊಳಿಸುತ್ತದೆ. ಈ ಸುರಂಗ ಮಾರ್ಗದ ಅಭಿವೃದ್ಧಿಗೆ ಬರೋಬ್ಬರಿ ಹತ್ತು ವರ್ಷಗಳು ಹಿಡಿದಿವೆ.
ಉದ್ಘಾಟನಾ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಉಪಸ್ಥಿತರಿದ್ದರು.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು