ಬೆಂಗಳೂರು : ಮೈಸೂರಿನಲ್ಲಿ ಆ. 30 ರಂದು ‘ಗೃಹಲಕ್ಷ್ಮಿ’ ಯೋಜನೆಗೆ ಅಧಿಕೃತ ಚಾಲನೆ ಆಗಲಿದೆ.
ಅದೇ ದಿನ ಮಹಿಳೆಯರ ಖಾತೆಗೆ 2,000 ರು ಜಮಾ ಮಾಡಲು ಸಿದ್ದತೆ ನಡೆದಿದೆ. ಆದರೆ ಕೆಲವು ಮಹಿಳೆಯರಿಗೆ ಮಾತ್ರ ಯೋಜನೆಯ ಗ್ಯಾರೆಂಟಿ ಸಿಗುವುದಿಲ್ಲ.
ಕೆಲವು ಮಹಿಳೆಯರಿಗೆ ಮಾತ್ರ ‘ಗೃಹಲಕ್ಷ್ಮಿ’ ಯ 2000 ಹಣ ಪಡೆಯುವ ಭಾಗ್ಯ ಇಲ್ಲ. ಸರ್ಕಾರಕ್ಕೆ ಹೊರೆ ಆಗಬಾರದು ಎಂದು ಕಾರಣಕ್ಕಾಗಿ BPL ಕಾರ್ಡ್ ಹೊಂದಿರುವ ಮಹಿಳೆಯರಿಗೆ ಮಾತ್ರ ಹಣ ವರ್ಗಾವಣೆ ಆಗುವುದು ಎಂದು ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಯಾವ ಮಹಿಳೆಯರಿಗೆ 2000 ರು ಹಣ ಪಡೆಯುವ ಭಾಗ್ಯ ಇರಲ್ಲ :
- 1) ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರಿಗೂ ಗೃಹಲಕ್ಷ್ಮಿ ಯೋಜನೆ ಸಹಾಯಧನ ಸಿಗುವುದಿಲ್ಲ.
- 2) ನಾಲ್ಕು ಚಕ್ರದ ವೈಟ್ ಬೋರ್ಡ್ ಕಾರು ಹೊಂದಿರುವ ಕುಟುಂಬದ ಮಹಿಳೆಯರಿಗೆ 2000 ಹಣ ಸಿಗಲ್ಲ.
- 3) ಸರ್ಕಾರಿ ಹುದ್ದೆ ಹೊಂದಿರುವ ಮತ್ತು ಪೆನ್ಷನ್ ಪಡೆಯುವ ಕುಟುಂಬದ ಮಹಿಳೆಯರಿಗೆ ಹಣ ಸಿಗಲ್ಲ.
- 4) ಆದಾಯ ತೆರಿಗೆ, ಪ್ರೊಫೆಷನಲ್ ಟ್ಯಾಕ್ಸ್ , GST ರಿಟರ್ನ್ಸ್ ಪಾವತಿಸುವ ಕುಟುಂಬದ ಮಹಿಳೆಯರಿಗೆ ಹಣ ಸಿಗಲ್ಲ
- 5) ಏಳು ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ಕುಟುಂಬದ ಮಹಿಳೆಯರಿಗೆ ಹಣ ಸಿಗಲ್ಲ.
ಮುಖ್ಯವಾದ ವಿಚಾರ ಅಂದ್ರೆ ಗೃಹಲಕ್ಷ್ಮಿಗೆ’ ಅರ್ಜಿ ಸಲ್ಲಿಸದ ಮಾತ್ರಕ್ಕೆ ಹಣ ಜಮೆ ಆಗಲ್ಲ, ತಪ್ಪದೇ ನೀವು ಈ ಕೆಲಸ ಮಾಡಬೇಕು .ಅರ್ಜಿ ಸಲ್ಲಿಕೆ ಪೂರ್ತಿಯಾದ ಮೇಲೂ ಈ ಕೆಲಸ ಮಾಡದಿದ್ದರೆ ಅವರು ಯೋಜನೆಯಿಂದ ವಂಚಿತರಾಗಬಹುದು. ಯಾಕೆಂದರೆ ಯಜಮಾನಿಯರು ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದೇ ಇರುವುದು. ತಪ್ಪದೇ ನೀವು ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು. ಹಣವನ್ನು ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಲಾಗಿದ್ದು. ಆಯನೂರು ಮಂಜುನಾಥ್, ನಾಗರಾಜ್ ಗೌಡ ಕಾಂಗ್ರೆಸ್‌ಗೆ ಸೇರ್ಪಡೆ
ಆದ್ದರಿಂದ ತಪ್ಪದೇ ನೀವು ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು.ಅರ್ಜಿ ಸಲ್ಲಿಸಿದ್ದರು ಕೂಡ ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಆಧಾರ್ ಸೀಡಿಂಗ್ ಗಾಗಿ ಅರ್ಜಿ ಸಲ್ಲಿಸಿ, ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಮಾಡಿಸಬೇಕು.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ