ಕಾವೇರಿ ನೀರು ಹಂಚಿಕೆ: ಸೆ. 1ಕ್ಕೆ ವಿಚಾರಣೆ- ನೀರಿನ ಹಂಚಿಕೆ ವಿಷಯದಲ್ಲಿ ನಾವು ತಜ್ಞರಲ್ಲ : ಕೋರ್ಟ್

Team Newsnap
1 Min Read

ನವದೆಹಲಿ : ಕಾವೇರಿ ನೀರು ಹಂಚಿಕೆ ವಿಚಾರ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಶುಕ್ರವಾರ ಮಹತ್ವದ ವಿಚಾರಣೆ ನಡೆಯಿತು.

ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳ ವಾದವನ್ನು ಆಲಿಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ, ಸೆಪ್ಟೆಂಬರ್ 1ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ಸದ್ಯಕ್ಕೆ ಮಧ್ಯ ಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಈ ಮೂಲಕ ಸದ್ಯ ವಿವಾದ ಬಗೆಹರಿಸುವುದನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಬಿಟ್ಟಿದೆ. ಸುಪ್ರೀಂ ಕೋರ್ಟ್ ತೀರ್ಮಾನದಿಂದ ತಮಿಳುನಾಡಿಗೆ ನಿರಾಸೆಯಾಗಿದೆ.

ಮುಂದಿನ ಸೋಮವಾರ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯ ತೀರ್ಮಾನ ತುಂಬಾನೇ ಮಹತ್ವ ಪಡೆದುಕೊಂಡಿದೆ.

ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆಯು ಮುಂದಿನ ಸೋಮವಾರ ನಡೆಯಲಿದೆ. ಮುಂದಿನ 15 ದಿನಗಳ ತನಕ ನೀರು ಹಂಚಿಕೆ ಬಗ್ಗೆ ಈ ಸಭೆಯಲ್ಲಿ ಪರಿಶೀಲಿಸಿ ಸೂಕ್ತ ಆದೇಶವನ್ನು ಆ ಸಮಿತಿ ನೀಡಲಿದೆ. ನಂತರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲನೆ ಆಗಿದೆಯೇ? ಇಲ್ಲವೇ? ಎಂಬುವುದನ್ನು ಗಮನಿಸಲಿದೆ. ಪ್ರಾಧಿಕಾರ ನೀಡಿದ್ದ ಆದೇಶ ರಾಜ್ಯದ ಹಿತಾಸಕ್ತಿಗೆ ವಿರುದ್ಧ ಎಂದು ಕರ್ನಾಟಕ ಹೇಳಿದೆ. ಈ ವಾದವನ್ನು ತಮಿಳುನಾಡು ವಿರೋಧಿಸಿದ್ದು ನೀರಿನ ಪ್ರಮಾಣ ಹೆಚ್ಚಬೇಕು ಎಂದು ಹೇಳಿದೆ. ಹೀಗಾಗಿ ಮುಂದಿನ ಶುಕ್ರವಾರ ನಾವು ಮತ್ತೆ ವಿಚಾರಣೆ ಮಾಡುತ್ತೇವೆ ಎಂದು ಸುಪ್ರೀಂ ಕೋರ್ಟ್​ ತಿಳಿಸಿದೆ.‘ಗೃಹಲಕ್ಷ್ಮಿ’ ಯೋಜನೆಯ ಹಣ ಪಡೆಯುವ ಭಾಗ್ಯ ಕೆಲವು ಮಹಿಳೆಯರಿಗೆ ಗ್ಯಾರೆಂಟಿ ಇಲ್ಲ

ಎರಡೂ ರಾಜ್ಯಗಳ ವಾದ ಬಳಿಕ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಿ.ಆರ್. ಗವಾಯಿ, ಕರ್ನಾಟಕ ನೀರು ಬಿಡುಗಡೆ ಮಾಡಿದ್ದೇವೆ ಎಂದಿದೆ. ಬಿಡುಗಡೆಯಾದ ನೀರು ತಮಿಳುನಾಡು ತಲುಪಲು ಮೂರು ದಿನ ಬೇಕು. ನಾವು ಹೇಗೆ ಆದೇಶ ನೀಡಲು ಸಾಧ್ಯ? ನಾವು ನೀರಿನ ಹಂಚಿಕೆ ವಿಷಯದಲ್ಲಿ ತಜ್ಞರಲ್ಲ. ನೀವು ಪ್ರಾಧಿಕಾರವನ್ನು ಸಂಪರ್ಕಿಸಿ ಎಂದರು.

Share This Article
Leave a comment