ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಘವೇಂದ್ರ ಆನ್‍ಲೈನ್ ವಂಚನೆ ಗೆ ಒಳಗಾಗಿದ್ದನ್ನು ಹೇಳಿಕೊಂಡರು.ಮುಂಬೈ ಮೂಲದ ವಂಚಕನಿಂದ ವಂಚನೆಗೆ ಬಿವೈಆರ್ ಒಳಗಾಗಿದ್ದಾರೆ, 16 ಲಕ್ಷ ಹಣ ಕಳೆದುಕೊಂಡಿದ್ದನ್ನು ನೆನಪಿಸಿಕೊಂಡರು.ಇದನ್ನು ಓದಿ –ಮಂಗಳೂರು: ಗುಂಡು ಹಾರಿಸಿಕೊಂಡು ಮಹಿಳಾ ಪಿಎಸ್‌ಐ ಆತ್ಮಹತ್ಯೆ ಯತ್ನ
ಶಿವಮೊಗ್ಗದ ಎಂಜಿನಿಯರಿಂಗ್ ಕಾಲೇಜಿನ ಅಕೌಂಟ್ ನಿಂದ ಕಿಡಿಗೇಡಿ 16 ಲಕ್ಷ ಹಣವನ್ನು ಆನ್‍ಲೈನ್ ನಲ್ಲಿ ಲಪಟಾಯಿಸಿದ್ದನು. ಬಳಿಕ ಪೊಲೀಸರ ಸಹಾಯದಿಂದ ಹಣವನ್ನು ಹಿಂಪಡೆದುಕೊಂಡಿರುವುದಾಗಿ ಸಂಸದರು ತಿಳಿಸಿದರು.
ಓಟಿಪಿ ಮೂಲಕ ಹಣ ಕದ್ದಿರುವುದಾಗಿ ಸಂಸದರು ತಿಳಿಸಿದ್ದಾರೆ. ಹೀಗಾಗಿ ಯಾರೂ ಕೂಡ ಓಟಿಪಿಯನ್ನು ಯಾರಿಗೂ ಕೊಡಬೇಡಿ ಎಂದು ಮನವಿ ಮಾಡಿಕೊಂಡರು. ಯಾವುದೇ ಬ್ಯಾಂಕ್ ನಿಂದ ಓಟಿಪಿಯನ್ನು ಕೇಳುವುದಿಲ್ಲ. ಈ ರೀತಿ ಕೇಳಿ ದಂಧೆ ಮಾಡುತ್ತಾರೆ ಎಚ್ಚರಿಕೆ ವಹಿಸಿ ಎಂದು ಸಂಸದರು ಮನವಿ ಮಾಡಿಕೊಂಡರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು