December 24, 2024

Newsnap Kannada

The World at your finger tips!

bindu

ಶೀಲ ಶಂಕಿಸಿ ಪತಿ ನೀಡುತ್ತಿದ್ದ ಕಿರುಕುಳಕ್ಕೆ ನೊಂದು ಗೃಹಿಣಿ ಆತ್ಮಹತ್ಯೆ

Spread the love

ಪತಿಯ ಕಿರುಕುಳದಿಂದ ನೊಂದ ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಕೆ.ಆರ್.ನಗರದಲ್ಲಿ ನಡೆದಿದೆ.

ಇಂದು ಬೆಳಗ್ಗೆ ಗೃಹಿಣಿ ಬಿಂದುಶ್ರೀ ಎಂಬಾಕೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ, ಮನೆಯಲ್ಲಿ ಡೆತ್ ನೋಟ್ ಕೂಡ ಲಭ್ಯವಾಗಿದೆ.

7 ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಅರಸಿಕೆರೆಯ ಚಂದ್ರಶೇಖರ್ ಜೊತೆ ಬಿಂದುಶ್ರೀಯನ್ನು ಮದುವೆ ಮಾಡಿಕೊಡಲಾಗಿತ್ತು. ಆದರೆ ಚಂದ್ರಶೇಖರ್ ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದನು.

bindu1

ಪತಿಯ ಕಿರುಕುಳದಿಂದ ಬೇಸತ್ತ ಬಿಂದುಶ್ರೀ ಕೆಲ ದಿನಗಳ ಹಿಂದೆ ತವರು ಸೇರಿದ್ದರು. ಇತ್ತೀಚೆಗೆ ಕೆ.ಆರ್.ನಗರಕ್ಕೆ ಬಂದಿದ್ದ ಚಂದ್ರಶೇಖರ್ ಪತ್ನಿಯನ್ನು ಕಳುಹಿಸಿ ಕೊಡಿ. ಚೆನ್ನಾಗಿ ನೋಡಿಕೊಳ್ಳುತ್ತೆನೆಂದು ಭರವಸೆ ನೀಡಿದ್ದನು.

ಡೆತ್‍ನೋಟ್ ನಲ್ಲಿ ಇರುವುದೇನು?

ಬಿಂದುಶ್ರೀ ಬರೆದ ಡೆತ್ ನೋಟ್ ನಲ್ಲಿ ‌ಅಮ್ಮ ನಾನು ಇರೋದು ನಿನಗೆ ಇಷ್ಟ ಇಲ್ಲ. ಅಲ್ಲಿಗೆ ಹೋದ್ರೆ ಚೆನ್ನಾಗಿ ನೋಡಿಕೊಳ್ಳಲ್ಲ, ಮತ್ತೆ ಹಿಂಸೆ ಕೊಡುತ್ತಾನೆ. ಹೋಗಲ್ಲ ಅಂದ್ರೆ ಹಿಂಸೆ ಮಾಡಿ ಕಳುಹಿಸುತ್ತಿದ್ದೀರಿ. ಹೋದ್ರೆ ದಿನ ದಿನ ಸಾಯೋದಕ್ಕೆ ನನಗೆ ಆಗಲ್ಲ. ಹಾಗಾಗಿ ಒಂದೇ ದಿನ ಸಾಯೋದು ಒಳ್ಳೆಯದಲ್ವಾ? ಮತ್ತೆ ನಾನು ಸತ್ತನೆಂದು ಮಕ್ಕಳನ್ನು ಅವನ ಜೊತೆ ಕಳುಹಿಸಬೇಡ ಎಂದು ಬರೆದಿದ್ದಾರೆ.

ನೀವು ಚೆನ್ನಾಗಿರಬೇಕು ಅಷ್ಟೆ. ಅವನು ನೀವು ಅಂದುಕೊಂಡಿರುವಷ್ಟು ಒಳ್ಳೆಯ ವನಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ದಯವಿಟ್ಟು ಕ್ಷಮಿಸಿ. ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಪ್ಲೀಸ್ ಅಮ್ಮ. ಆ್ಯಮ್ ಸಾರಿ ಅಮ್ಮ.

ಪತಿಯ ಬಗ್ಗೆ ಗೊತ್ತಿದ್ದ ಬಿಂದುಶ್ರೀ ಅವರಿಗೆ ಅರಸಿಕೆರೆಗೆ ಹೋಗಲು ಇಷ್ಟವಿರಲಿಲ್ಲ. ತವರಿನಲ್ಲಿಯೇ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೆ.ಆರ್. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!