January 29, 2026

Newsnap Kannada

The World at your finger tips!

sucide

ಸಹೋದರನ ಆತ್ಮಹತ್ಯೆಗೆ ನೊಂದು ಅಣ್ಣನೂ ನೇಣಿಗೆ ಶರಣು

Spread the love

ತಮ್ಮ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಅಣ್ಣನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಎಚ್ ಡಿ ಕೋಟೆ ತಾಲೂಕಿನ ಎಲೆಹುಂಡಿ ಗ್ರಾಮದಲ್ಲಿ ನಡೆದಿದೆ.

ಸಹೋದರರಾದ ವೆಂಕಟೇಶ್ (28), ಹರೀಶ್ (25) ಪ್ರತ್ಯೇಕ ಸ್ಥಳಗಳಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದಾರೆ.

ಟ್ಯಾಕ್ಟರ್‌ ಅನ್ನು ರಸ್ತೆಯಲ್ಲಿ ಸರಿಯಾಗಿ ಓಡಿಸಿಕೊಂಡು ಬರುವಂತೆ ಹರೀಶ್‌ಗೆ ತಂದೆ ಬುಧವಾರ ರಾತ್ರಿ ಬುದ್ಧಿವಾದ ಹೇಳಿದ್ದಾರೆ. ತಂದೆಯ ಮಾತುಗಳಿಂದ ಮನನೊಂದ ಹರೀಶ್ ಗುರುವಾರ ಬೆಳಿಗ್ಗೆ ಎಲೆಹುಂಡಿ ಸಮೀಪದ ಕೆರೆ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾರೆ.

ಈ ವಿಚಾರವನ್ನು ಮೈಸೂರಿಗೆ ಹೋಗಿದ್ದ ವೆಂಕಟೇಶ್‌ಗೆ ಸ್ನೇಹಿತರು ತಿಳಿಸಿದ್ದಾರೆ. ಅಣ್ಣ-ತಮ್ಮಂದಿರ ನಡುವೆ ಹೊಂದಾಣಿಕೆ ಮತ್ತು ಪ್ರೀತಿ ಹೆಚ್ಚಾಗಿದ್ದರಿಂದ ವೆಂಕಟೇಶ್, ಮನೆಗೆ ಬರದೆ ತನ್ನ ಕಾರಿನಲ್ಲಿ ಸರಗೂರು ಕಡೆಗೆ ಹೋಗಿ ನಾಲೆಯ ಸಮೀಪ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

error: Content is protected !!