ಡಿಸಿ ರೋಹಿಣಿ‌ ಸಿಂಧೂರಿ ಮೇಡಂಗೆ ಕಾರಿಗೆ ಪಂಕ್ಚರ್ ಹಾಕೋದೂ ಗೊತ್ತು …..

Team Newsnap
1 Min Read
Rohini Sindhuri's husband Sudhir grab land in Yalahanka? Complaint via tweet to DGP ರೋಹಿಣಿ ಸಿಂಧೂರಿ ಪತಿ ಸುಧೀರ್ ಯಲಹಂಕದಲ್ಲಿ ಭೂ ಕಬಳಿಕೆ ? ಡಿಜಿಪಿಗೆ ಟ್ವೀಟ್ ಮೂಲಕ ದೂರು

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಏನಾದರೂ ಒಂದು ವಿಶೇಷ ಮಾಡಿ ಸುದ್ದಿಯಲ್ಲಿ ಇರುತ್ತಾರೆ.

rohini p

‌ಈಗ ಡಿಸಿ ರೋಹಿಣಿ ಸಿಂಧೂರಿ ಮೇಡಂ‌ ಅವರು ತಮ್ಮ ಕಾರ್ ಗೆ ತಾವೇ ಪಂಕ್ಚರ್ ಹಾಕುವ ವಿಡಿಯೋ ವೈರಲ್ ಆಗಿದೆ. ಡಿ.ಸಿಯೊಬ್ಬರು​ ಪಂಕ್ಚರ್​​ ಹಾಕುತ್ತಿರುವುದನ್ನು ನೋಡಿ ಜನರು ಬೆರಗಾಗಿದ್ದಾರೆ. ರೋಹಿಣಿ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕುಟುಂಬದ ಜೊತೆ ಹೊರಗೆ ಹೋಗಿದ್ದ‌ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ಕಾರಿನ ಟೈರ್ ಕಳಚಿ ಪಂಕ್ಚರ್ ಹಾಕುತ್ತಿದ್ದರು.. ಇದನ್ನು ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೋ ಮಾಡಿದ್ದಾರೆ.

rohini p1

ಈ ವೇಳೆ ಆ ವ್ಯಕ್ತಿಯೊಬ್ಬರು, ಮೇಡಂ ನೀವು ರೋಹಿಣಿ ಸಿಂಧೂರಿ ಅಲ್ವಾ? ನೀವು ಪಂಕ್ಚರ್​ ಹಾಕ್ತಿದ್ದೀರಾ? ಅಂತ ಪ್ರಶ್ನಿಸುವ ವಿಡಿಯೋದಲ್ಲಿ ಕೇಳಬಹುದು.

ಆ ವ್ಯಕ್ತಿಯ ಪ್ರಶ್ನೆಗೆ ಯಾವುದೇ ಉತ್ತರ ನೀಡದೇ ಸಿಂಧೂರಿ ನಕ್ಕು ಸುಮ್ಮನಾಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

Share This Article
Leave a comment