January 12, 2025

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಸೋಮವಾರ 16,604‌ ಮಂದಿ ಪಾಸಿಟಿವ್ – 44,473 ಮಂದಿ ಬಿಡುಗಡೆ

Spread the love

ರಾಜ್ಯದಲ್ಲಿ ಸೋಮವಾರ ಕೊರೋನಾ ಸೋಂಕಿತರ ಪ್ರಮಾಣ ಭಾರಿ ಇಳಿಮುಖವಾಗಿದೆ. ಸೋಂಕಿತರ ಸಂಖ್ಯೆ 16,604 ಹಾಗೂ ಆಸ್ಪತ್ರೆಯಿಂದ 44,473 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 411 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.‌

ರಾಜ್ಯದಲ್ಲಿ 23,560 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 98,769 ಆರ್​ಟಿಪಿಸಿಆರ್ ಟೆಸ್ಟ್​ಗಳೂ ಸೇರಿದಂತೆ ಒಟ್ಟು 1,22,329 ಪರೀಕ್ಷೆಗಳನ್ನ ನಡೆಸಲಾಗಿದೆ.

ಈ ಪೈಕಿ ಇಂದು ಒಟ್ಟು 16,604 ಕೊರೊನಾ ಪಾಸಿಟಿವ್​ ಕೇಸ್​ಗಳು ಪತ್ತೆಯಾಗಿವೆ. ಈವರೆಗೆ ರಾಜ್ಯದಲ್ಲಿ ಸೋಂಕಿಗೊಳಗಾದವರ ಸಂಖ್ಯೆ 26,04,431ಕ್ಕೆ ಏರಿಕೆಯಾಗಿದೆ.

ಇಂದು 44,473 ಸೋಂಕಿತರು ಗುಣಮುಖರಾಗಿದ್ದು ಈವರೆಗೆ ಒಟ್ಟು 22,61,590 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆದಂತಾಗಿದೆ. ಇಂದು ಸೋಂಕಿನಿಂದ 411 ಮಂದಿ ಸಾವನ್ನಪ್ಪಿದ್ದು ಇಲ್ಲಿವರೆಗೆ 29,090 ಮಂದಿ ಸೋಂಕಿಗೆ ಬಲಿಯಾದಂತಾಗಿದೆ. ಸದ್ಯ ರಾಜ್ಯದಲ್ಲಿ 3,13,730 ಆ್ಯಕ್ಟಿವ್ ಕೇಸ್​ಗಳಿವೆ.

ಬೆಂಗಳೂರು ನಗರದಲ್ಲಿ ಇಂದು 3,992 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. 242 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಮೈಸೂರು 1,171, ಹಾಸನ 1,162, ಬೆಳಗಾವಿ 910, ತುಮಕೂರು 806, ಮಂಡ್ಯ 753, ಚಿತ್ರದುರ್ಗ 731 ಮತ್ತು ದಕ್ಷಿಣ ಕನ್ನಡದಲ್ಲಿ 651 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.

Copyright © All rights reserved Newsnap | Newsever by AF themes.
error: Content is protected !!