ಸಿಡಿ ಕೇಸ್​: ಜೂನ್​ 17ಕ್ಕೆ ಸಮಗ್ರ ವರದಿ ಸಲ್ಲಿಸುವಂತೆ ಎಸ್​ಐಟಿಗೆ ಹೈಕೋರ್ಟ್ ಸೂಚನೆ

Team Newsnap
1 Min Read
shock for Congress: High Court order to cancel ACB - Lokyukta gets power again

ರಮೇಶ್ ಜಾರಕಿಹೊಳಿ ಖಾಸಗಿ ವಿಡಿಯೋ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಿತು.

ಎಸ್ ಐಟಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ವರದಿ ಸಲ್ಲಿಸಿದರು. ಮೂರು ಎಫ್​ಐಆರ್​ಗಳ ಬಗ್ಗೆ ಹೈಕೋರ್ಟ್​ಗೆ ರಿಪೋರ್ಟ್ ಸಲ್ಲಿಸಲಾಯಿತು. ಇದಕ್ಕೆ ಅರ್ಜಿದಾರರ ಪರ ವಕೀಲರಿಂದ ಆಕ್ಷೇಪಣೆಯೂ ಸಲ್ಲಿಕೆಯಾಯ್ತು.

ರಿಪೋರ್ಟ್ ನಲ್ಲಿ ಪ್ರಕರಣದ ತನಿಖೆ ಮುಂದುವರೆಯುತ್ತಿದೆ. ಈ ವೇಳೆ ಹೈಕೋರ್ಟ್​ 17 ಜೂನ್ 2021 ರಂದು ಎಸ್​ಐಟಿ ಮುಖ್ಯಸ್ಥರ ಸಹಿ ಸಮೇತ ವರದಿ ನೀಡಲು ಹೈಕೋರ್ಟ್ ಸೂಚನೆ ನೀಡಿತು.

ಎಸ್ಐಟಿ ಮುಖ್ಯಸ್ಥ ಇಲ್ಲದಿದ್ದರೆ ಅನುಮತಿ ಮೇಲೆ ಸಲ್ಲಿಸಿ. ಇಲ್ಲವೇ ಎಸ್ಐಟಿಗೆ ಸದ್ಯ ಇನ್ ಚಾಜ್೯ ಇರುವವರು ನೀಡಬೇಕು ಎಂದು ಹೈಕೋರ್ಟ್ ಹೇಳಿತು.

ಅರ್ಜಿ ವಿಚಾರಣೆಯನ್ನು ಜೂ. 18ಕ್ಕೆ ಮುಂದೂಡಿಕೆ ಮಾಡಲಾಯ್ತು.

ಎಸ್ಐಟಿ ಮುಖ್ಯಸ್ಥರ ಸಹಿ ಇಲ್ಲದೇ ವರದಿ ಸಲ್ಲಿಕೆ ಮಾಡುವ ಅಗತ್ಯವೇನಿತ್ತು.? ಎಂದು ಹೈಕೋರ್ಟ್ ಕೇಳಿದಾಗ ಅವರು ರಜೆ ಇರುವ ಕಾರಣ ಇವರಿಂದ ಸಲ್ಲಿಕೆ ಅಂತಾ ಉತ್ತರ ನೀಡಲಾಯ್ತು. ಅಲ್ಲದೆ ಇನ್ನೊಂದು ಪ್ರಕರಣದಲ್ಲಿ ಪ್ರಕರಣದ ತನಿಖಾ ವರದಿಯನ್ನು ಸೀಲ್ಡ್ ಕವರ್​ನಲ್ಲಿ ಎಸ್ಐಟಿ ಟೀಂ ರಿಪೋರ್ಟ್ ಸಲ್ಲಿಕೆ ಮಾಡಿತು.

Share This Article
Leave a comment