ಜು 23ರಂದು ಹಿರೇಮಗಳೂರು ಕಣ್ಣನ್ ಗೆ ಮುದ್ದುರಾಮ ಪ್ರಶಸ್ತಿ ಪ್ರದಾನ

Team Newsnap
1 Min Read

ನಗರದ ಮುದ್ದುರಾಮ ಪ್ರತಿಷ್ಠಾನವು ಜುಲೈ 23ರಂದು ಸಂಜೆ 4.15ಕ್ಕೆ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಮುದ್ದುರಾಮ ಪ್ರಶಸ್ತಿ/ಪುರಸ್ಕಾರ ಹಾಗೂ ಕೃತಿಗಳ ಬಿಡುಗಡೆ ಸಮಾರಂಭವನ್ನು ಆಯೋಜಿಸಿದೆ.

2023ನೇ ಸಾಲಿನ ಮುದ್ದುರಾಮ ಪ್ರಶಸ್ತಿಯನ್ನು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರಿಗೆ ನೀಡಲಾಗುವುದು. 50 ಸಾವಿರ ಗೌರವಧನ ಹಾಗೂ ಫಲಕದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಚೌಪದಿ ರಚನೆಕಾರ ಎಂ.ಮುತ್ತುಸ್ವಾಮಿ ಅವರಿಗೆ ಮುದ್ದುರಾಮ ಪುರಸ್ಕಾರ ನೀಡಲಾಗುವುದು.

ಇದು 25 ಸಾವಿರ ಗೌರವಧನ ಹಾಗೂ ಫಲಕವನ್ನು ಒಳಗೊಂಡಿರುತ್ತದೆ. ಇದೇ ಸಮಾರಂಭದಲ್ಲಿ ಹಿರೇಮಗಳೂರು ಕಣ್ಣನ್ ಅವರ ಕವಿ ಕೆ.ಸಿ.ಶಿವಪ್ಪ ಕುರಿತ ‘ಮುದ್ದುರಾಮ ಲಹರಿ’ ಹಾಗೂ ಶ್ವೇತಾ ಪ್ರಕಾಶ್ ಅವರ ಚೌಪದಿಗಳ ಸಂಕಲನ ‘ಪದ್ಮ ಪಲ್ಲವ’ ಕೃತಿಗಳು ಬಿಡುಗಡೆ ಆಗಲಿವೆ.

muttu swamy

ಅಂದಿನ ಸಮಾರಂಭದ ಸಾನ್ನಿಧ್ಯವನ್ನು ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸುವರು.

ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಹಾಗೂ ವಾಗ್ಮಿ ಎಂ.ಕೃಷ್ಣೇಗೌಡ ಭಾಗವಹಿಸುವರು.
ಹಿರಿಯ ಸಾಹಿತಿ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ಅಧ್ಯಕ್ಷತೆ ವಹಿಸುವರು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

Share This Article
Leave a comment