ಆ.26ಕ್ಕೆ ಕೊಡಗು SP ಕಚೇರಿಗೆ ಮುತ್ತಿಗೆ- ಸರ್ಕಾರ – ಪೋಲಿಸರಿಗೆ ಸಿದ್ದರಾಮಯ್ಯ ತರಾಟೆ

Team Newsnap
1 Min Read

ಮಳೆ ಹಾನಿ ವೀಕ್ಷಿಸಲು ಕೊಡಗು ಜಿಲ್ಲೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ ಸಂದರ್ಭದಲ್ಲಿ, ಬಿಜೆಪಿ ಹಾಗೂ ಹಿಂದೂ ಪರ ಕೆಲವು ಸಂಘಟನೆಗಳು ಮೊಟ್ಟೆ ಎಸೆದಿದ್ದನ್ನು ಖಂಡಿಸಿ ಆ. 26 ರಂದು ಕೊಡಗಿನ SP ಕಚೇರಿ ಎದುರು ಪೋಲಿಸ್ ವೈಫಲ್ಯದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಾಡಲಿದ್ದಾರೆ.

ಸಿದ್ದರಾಮಯ್ಯ ಭೇಟಿ ವೇಳೆಯಲ್ಲಿ ಅಹಿತಕರವಾದ ವಾತಾವರಣವನ್ನು ಸೃಷ್ಟಿಸಿ ಪ್ರಜಾಪ್ರಭುತ್ವಕ್ಕೆ ಅಗೌರವ ತೋರಿಸಿದ್ದಾರೆ. ಆಡಳಿತ ಪಕ್ಷದ ಪುಂಡಾಟಿಕೆಯನ್ನು ನೋಡುತ್ತ, ಪರಿಸ್ಥಿತಿ ಹತೋಟಿ ಮೀರುತ್ತಿರುವಾಗ ಕೈಚೆಲ್ಲಿ ಕುಳಿತ ಪೊಲೀಸರು ಹಾಗೂ ಸರ್ಕಾರದ ವಿರುದ್ಧವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಕೊಡಗು ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ತಿಳಿಸಿದ್ದಾರೆ.

ಈ ನಡುವೆ ಕೊಡಗಿನಲ್ಲಿ ತಮ್ಮ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು ಹಾಗೂ ಕಾರಿಗೆ ಮೊಟ್ಟೆ ಎಸೆತ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರು, ಪೊಲೀಸರು ಏನು ತಿಳಿದುಕೊಂಡಿದ್ದೀರಾ? ಬಿಜೆಪಿನೇ ಗೂಟ ಹೊಡ್ಕೊಂಡಿರ್ತಾರೆ ಅಂದ್ಕೊಂಡಿದ್ದೀರಾ? ಅವರನ್ನು ಹಿಡಿದು ಒಳಗೆ ಹಾಕೋದಕ್ಕೆ ಆಗುತ್ತಿರಲಿಲ್ವಾ? 6-7 ತಿಂಗಳ ನಂತರ ನಾವೇ ಅಧಿಕಾರಕ್ಕೆ ಬರ್ತೀವಿ, ಪೊಲೀಸರ ಜೊತೆ ಹೇಗೆ ನಡೆದುಕೊಳ್ಳಬೇಕು ಅಂತ ನಮಗೆ ಗೊತ್ತಿದೆ. ಆರ್​ಎಸ್​ಎಸ್ ಕಾರ್ಯಕರ್ತರ ಜೊತೆ ನೀವೂ ಶಾಮೀಲಾಗಿದ್ದೀರಾ ಅಂತ ಪ್ರಶ್ನೆ ಮಾಡಿದ್ದಾರೆ.

RSS ಕಾರ್ಯಕರ್ತರನ್ನು ಬೀದಿಯಲ್ಲಿ ಬಿಟ್ಟು ಆಟ ಆಡಿಸುತ್ತೀರಾ ? ನಮ್ಮ ಕಾರ್ಯಕರ್ತರಿಗೆ ಅವರಂತೆ ಮಾಡಲು ಬರಲ್ವಾ? ವಿಪಕ್ಷ ನಾಯಕರಿಗೆ ಕೊಡುವ ರಕ್ಷಣೆ ಬಗ್ಗೆ ತಿಳಿದಿರಬೇಕು. RSS ಕಾರ್ಯಕರ್ತರನ್ನು ಬಿಟ್ಟು ತಮಾಷೆ ನೋಡ್ತೀರಾ? ನಾನುಊ ಅ. 26ಕ್ಕೆ ಬರ್ತೀನಿ, ಪೊಲೀಸರ ವಿರುದ್ದ ಎಸ್​ಪಿ ಕಚೇರಿ ಮುತ್ತಿಗೆ ಹಾಕುತ್ತೇನೆ. ಬಿಜೆಪಿಯವರು ನೂರಕ್ಕೆ ನೂರು ಸೋಲುವುದು ಗ್ಯಾರೆಂಟಿ. ಕೊಡಗಿನ 2 ಕ್ಷೇತ್ರದಲ್ಲಿ ಕಾಂಗ್ರೆಸ್​ನವರೇ ಗೆಲ್ಲುತ್ತೀವಿ ಎಂದು ಹೇಳಿದ್ದಾರೆ.

Share This Article
Leave a comment