December 23, 2024

Newsnap Kannada

The World at your finger tips!

omicron

ಮಹಾರಾಷ್ಟ್ರದಲ್ಲಿ ಮೂರು ವರ್ಷದ ಮಗುವಿಗೆ ಬಾಧಿಸಿದ ಓಮಿಕ್ರಾನ್ : ದೇಶದ 32 ಜನರಿಗೆ ಓಮಿಕ್ರಾನ್

Spread the love

ಓಮಿಕ್ರಾನ್‌ ಈಗ ಮಕ್ಕಳಿಗೂ ಬಾಧಿಸುತ್ತದೆ ನಿನ್ನೆ ಮಹಾರಾಷ್ಟ್ರದಲ್ಲಿ 3 ವರ್ಷದ ಮಗುವಿನಲ್ಲಿ ಕೊರೊನಾ ವೈರಸ್‌ ರೂಪಾಂತರಿ ಓಮಿಕ್ರಾನ್‌ ಸೋಂಕು ಪತ್ತೆಯಾಗಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 3 ವರ್ಷದ ಮಗು ಸೇರಿದಂತೆ 7 ಮಂದಿಯಲ್ಲಿ ಓಮಿಕ್ರಾನ್‌ ಪತ್ತೆಯಾಗಿದೆ. ದೇಶದಲ್ಲಿ ಓಮಿಕ್ರಾನ್‌ ಸೋಂಕು ಒಟ್ಟು ಪ್ರಕರಣಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

ಸೋಂಕಿತ 7 ಮಂದಿ ಪೈಕಿ ಮೂವರು ಮುಂಬೈನವರಾಗಿದ್ದಾರೆ. ಇವರು ತಾಂಜೇನಿಯಾ, ಯುಕೆ, ದಕ್ಷಿಣ ಆಫ್ರಿಕಾದಿಂದ ಪ್ರಯಾಣ ಬೆಳೆಸಿದ್ದರು. ಇದರಿಂದಾಗಿ ಮುಂಬೈನಲ್ಲಿ ಈಗ ಒಟ್ಟು 5 ಓಮಿಕ್ರಾನ್‌ ಪ್ರಕರಣಗಳಿವೆ. ಒಟ್ಟು ಸೋಂಕಿತರ ಪೈಕಿ ನಾಲ್ವರಲ್ಲಿ ಯಾವುದೇ ರೋಗಲಕ್ಷಣಗಳಿರಲಿಲ್ಲ.

ವಿಶ್ವದಲ್ಲಿ ನವೆಂಬರ್‌ 24ರ ಸಂದರ್ಭದಲ್ಲಿ ಕೇವಲ ಎರಡು ದೇಶಗಳಲ್ಲಿ ಮಾತ್ರ ಓಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿದ್ದವು. ಈಗ ಆ ಸಂಖ್ಯೆ 59 ದೇಶಗಳಿಗೆ ವಿಸ್ತರಿಸಿದೆ. ಇಷ್ಟೂ ದೇಶಗಳಲ್ಲಿ ಈವರೆಗೆ ಓಮಿಕ್ರಾನ್‌ ಸೋಂಕಿತ ಒಟ್ಟು 2,936 ಪ್ರಕರಣಗಳು ವರದಿಯಾಗಿವೆ.

Copyright © All rights reserved Newsnap | Newsever by AF themes.
error: Content is protected !!