ಒಲಿಂಪಿಕ್ ಹಾಕಿ: ಭಾರತೀಯ ಮಹಿಳಾ ತಂಡಕ್ಕೆ ಸೆಮಿ ಫೈನಲ್ ನಲ್ಲಿ ಸೋಲು

Team Newsnap
1 Min Read

ಒಲಿಂಪಿಕ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾಕಿಯ ಸೆಮಿ ಫೈನಲ್ ಪ್ರವೇಶಿಸಿದ್ದ ಭಾರತ ಮಹಿಳಾ ತಂಡ ಫೈನಲ್​ಗೇರಲು ವಿಫಲವಾಗಿದೆ.

ಅರ್ಜೇಂಟಿನಾ ವಿರುದ್ಧ ನಡೆದ ಸೆಮಿ ಫೈನಲ್ ಕದನದಲ್ಲಿ ಭಾರತ 1-2 ಗೋಲುಗಳ ಅಂತರದಿಂದ ಸೋಲು ಕಂಡಿದೆ.

ಆದರೆ, ಭಾರತಕ್ಕೆ ಕಂಚು ಗೆಲ್ಲುವ ಅವಕಾಶವಿದ್ದು, ಇನ್ನೊಂದು ಸೆಮಿ ಫೈನಲ್​ನಲ್ಲಿ ಸೋಲುವ ತಂಡದ ವಿರುದ್ಧ ಪಂದ್ಯವಿದೆ.

ಇದರಲ್ಲಿ ಭಾರತ ಮಹಿಳಾ ಹಾಕಿ ತಂಡ ಗೆದ್ದರೆ ಕಂಚಿನ ಪದಕ ಮುಡಿಗೇರಿಸಿಕೊಳ್ಳಲಿದೆ.

ಪಂದ್ಯ ಆರಂಭವಾದ ಕೇವಲ ಎರಡು ನಿಮಿಷದಲ್ಲೇ ಭಾರತಕ್ಕೆ ಮೊದಲ ಗೋಲು ದಕ್ಕಿತು.

ವಂದನಾ ತಂಡಕ್ಕೆ ಖಾತೆ ತೆರೆದು ಮೊದಲ ಕ್ವಾರ್ಟರ್​ನಲ್ಲಿ ಭಾರತ 1-0 ಮುನ್ನಡೆ ಸಾಧಿಸುವಂತೆ ಮಾಡಿದರು.

ಎರಡನೇ ಕ್ವಾರ್ಟರ್​ನ ಆರಂಭದಲ್ಲಿ ಅರ್ಜೇಂಟಿನಾ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡು ತನ್ನ ಖಾತೆ ತೆರೆಯಿತು.

Share This Article
Leave a comment