ಭಾರತೀಯ ವಾಯುಪಡೆ (ಐಎಎಫ್) ಅಧಿಕಾರಿಯನ್ನು ಅತ್ಯಾಚಾರದ ಆರೋಪದ ಮೇಲೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಂಧಿಸಿದ್ದಾರೆ.
ಫ್ಲೈಟ್ ಲೆಫ್ಟಿನೆಂಟ್ ಅಮಿತೇಶ್ (29) ಅವರನ್ನು ಕೊಯಮತ್ತೂರಿನ ರೇಸ್ ಕೋರ್ಸ್ ನ ಸಹೋದ್ಯೋಗಿಯ ಆರೋಪದ ಮೇಲೆ ಐಎಎಫ್ ಕ್ಯಾಂಪಸ್ ನಲ್ಲಿ ನಿನ್ನೆ ಬಂಧಿಸಲಾಗಿದೆ. ಅಮಿತೇಶ್ ಇಲ್ಲಿ ತರಬೇತಿ ಪಡೆಯುತ್ತಿದ್ದರು.
ಸಂತ್ರಸ್ತೆ ಈ ಕುರಿತಂತೆ ಮಾತನಾಡಿ, ಸೆ.10ರಂದು ತರಬೇತಿ ಸಮಯದಲ್ಲಿ ನನಗೆ ಗಾಯವಾಯಿತು. ಅದಕ್ಕೆ ನಾನು ಔಷಧಿ ಸೇವಿಸಿ ಮಲಗಿಕೊಂಡೆ. ಆದರೆ ನಂತರ ಎಚ್ಚರವಾಗಿ ನೋಡಿದರೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ಯಾರು ಎಂದು ತಿಳಿದು ಅದನ್ನು ಐಎಎಫ್ ಅಧಿಕಾರಿಗಳಿಗೆ ದೂರು ನೀಡಿದೆ.
ಹಿರಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೊಯಮತ್ತೂರಿನ ಮಹಿಳಾ ಪೋಲಿಸ್ ಠಾಣೆಗೆ ದೂರು ನೀಡಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಮಿತೇಶ್‍ನನ್ನು ವಿಚಾರಣೆ ನಡೆಸಿ, ಕೊಯಮತ್ತೂರಿನ ಪೊಲೀಸರು ಬಂಧಿಸಿದರು. ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಈಗ ಅಮಿತೇಶ್ ಅವರನ್ನು ಉಡುಮಲ್ ಪೇಟೆ ಜೈಲಿಗೆ ಕಳಹಿಸಲಾಗಿದೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ