ಕೇಂದ್ರ ತಂಡದಿಂದ ಜಲಶಕ್ತಿ ಅಭಿಯಾನದ ಕೆರೆ,ಕಟ್ಟೆ ಕಾಮಗಾರಿಗಳ ವೀಕ್ಷಣೆ-ಪರಿಶೀಲನೆ

Team Newsnap
1 Min Read
Observation and inspection of lake and embankment works of Jalshakti Abhiyan by central team ಕೇಂದ್ರ ತಂಡದಿಂದ ಜಲಶಕ್ತಿ ಅಭಿಯಾನದ ಕೆರೆ,ಕಟ್ಟೆ ಕಾಮಗಾರಿಗಳ ವೀಕ್ಷಣೆ-ಪರಿಶೀಲನೆ #thenewsnap #latest_news #mandya #waterworks #india #NEWS #kannada_news #karnataka #Mysuru

ಕೇಂದ್ರ ಸಚಿವಾಲಯದಿಂದ ಆಗಮಿಸಿದ್ದ ತಂಡವು ಗುರುವಾರ ಮಂಡ್ಯ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಜಲಶಕ್ತಿ ಅಭಿಯಾನದಡಿ ನಿರ್ಮಾಣಗೊಂಡಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

WhatsApp Image 2022 06 30 at 6.29.13 PM 1

ತಾಲ್ಲೂಕಿನ ತೂಬಿನಕೆರೆ, ಗೋಪಾಲಪುರ, ಬೇಬಿ ಗ್ರಾಮ ಪಂಚಾಗಳಿಗಳಿಗೆ ಭೇಟಿ ನೀಡಿದ ತಂಡವು ಜಲಶಕ್ತಿ ಅಭಿಯಾನದಡಿ ಮಳೆ ನೀರು ಕೊಯ್ಲಿ ಕಾಮಗಾರಿ, ಅಮೃತ ಸರೋವರ ಅಭಿಯಾನಕ್ಕೆ ಆಯ್ಕೆಯಾಗಿರುವ ಕೆರೆ, ಕಟ್ಟೆ ಕಾಮಗಾರಿ, ನರೇಗಾ ಯೋಜನೆಯ ಒಗ್ಗೂಡಿಸುವಿಕೆಯಡಿ ಕೃಷಿ ಇಲಾಖೆ ವತಿಯಿಂದ ನಿರ್ಮಾಣಗೊಂಡಿರುವ ಕಾರೆಕಟ್ಟೆ ಚೆಕ್ ಡ್ಯಾಂ ಹಾಗೂ ಬಿದರಕಟ್ಟೆ ಕೆರೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವರದಿಯನ್ನು ಪಡೆದುಕೊಂಡರು.

ಇದೇ ವೇಳೆ ಬಿದರಕಟ್ಟೆಯ ಕೆರೆ ಏರಿ ಬಳಿ ಕೇಂದ್ರ ತಂಡದ ಅಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಶ್ರಮದಾನ ನಡೆಸಿದರು.ಇದನ್ನು ಓದಿ –ಮಾಹಾಗೆ ಏಕನಾಥ್‌ ಶಿಂಧೆ ಸಿಎಂ – ನಾನು ಸರ್ಕಾರದಲ್ಲಿ ಇರಲ್ಲ : ಫಡ್ನವೀಸ್‌

ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ(ಅಭಿವೃದ್ಧಿ) ಗಳಾದ ಸುಬ್ರಮಣ್ಯ ಶರ್ಮರವರು ಮಾತನಾಡಿ ದೇಶಕ್ಕೆ ಸ್ವಾತ್ರಂತ್ರ್ಯ ಬಂದು 75 ವರ್ಷಗಳಾಗಿದ್ದು, ಅಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಜಲಶಕ್ತಿ ಅಭಿಯಾನದ ಮೂಲಕ ಪ್ರತಿ ಜಿಲ್ಲೆಯಲ್ಲಿ 75 ಕೆರೆ ನಿರ್ಮಾಣ ಮಾಡಲು ಮಾನ್ಯ ಪ್ರಧಾನ ಮಂತ್ರಿಗಳ ಆದೇಶ ಮೇರೆಗೆ ಯೋಜನೆ ರೂಪಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 21 ಅಮೃತ ಸರೋವರ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಆಗಸ್ಟ್ 15ರೊಳಗೆ ಪೂರ್ಣಗೊಳಿಸಿ ಧ್ವಜಾರೋಹಣ ನಡೆಸಲು ಕ್ರಮವಹಿಸಲಾಗುತ್ತಿದ್ದು, ಉಳಿದ 54 ಕಾಮಗಾರಿಗಳನ್ನು ಎರಡನೇ ಹಂತದಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

WhatsApp Image 2022 06 30 at 6.29.12 PM


ಇದೇ ವೇಳೆ ಕೇಂದ್ರ ಸಚಿವಾಲಯದ ಆರ್ಥಿಕ ಇಲಾಖೆ ಉಪಕಾರ್ಯದರ್ಶಿ ಸೂರ್ಜಿತ್ ಕಾರ್ತಿಕೇಯನ್, ಸಿಡಬ್ಲ್ಯೂಪಿಸಿಆರ್ ವಿಜ್ಞಾನಿ ನಿಶ್ಚಯ್ ಮಲೋತ್ರ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಹೆಚ್. ಆರ್ ಶ್ರೀನಿವಾಸ್, ಕೃಷಿ ಇಲಾಖೆಯ ಉಪನಿರ್ದೇಶಕರಾದ ಮಾಲತಿ, ಸಹಾಯಕ ನಿರ್ದೇಶಕರಾದ ಸೌಮ್ಯ, ಸಹಾಯಕ ಕೃಷಿ ಅಧಿಕಾರಿ ಕೃಷ್ಣಯ್ಯ ಉಪಸ್ಥಿತರಿದ್ದರು.

Share This Article
Leave a comment