ದೇಹ, ಮನಸ್ಸು- ಬುದ್ಧಿಯ ಸಮತೋಲನಕ್ಕೆ ಪೌಷ್ಠಿಕ ಆಹಾರ ದಿವ್ಯೌಷಧಿ
ಪ್ರಧಾನಿ ಮೋದಿ ಮನ್ ಕಿ ಬಾತ್ ನಲ್ಲಿ ಘೋಷಣೆ
ಅಪೌಷ್ಠಿಕತೆಯ ಕಾರಣದಿಂದ ಮನುಷ್ಯನ ಆರೋಗ್ಯದಲ್ಲಿ ಉಂಟಾಗುವ ಅನಾರೋಗ್ಯಕ್ಕೆ ಮನೆಯ ಮದ್ದು ಎಂದರೆ ಪೌಷ್ಠಿಕ ಆಹಾರ ಸೇವನೆ. ಇದನ್ನೇ ಪ್ರಧಾನಿ ಮಂತ್ರಿ ಮೋದಿ ಮನ್
ಕಿ ಬಾತ್ ರೆಡಿಯೋ ಕಾರ್ಯಕ್ರಮದಲ್ಲಿ ಸಮಗ್ರ ಮಾಹಿತಿ ನೀಡಿ ವಿವರಣೆ ಕೊಟ್ಟಿದ್ದಾರೆ.
ಸೆಪ್ಟಂಬರ್ ತಿಂಗಳ ಪೂರ್ತಿ ಪೌಷ್ಠಿಕ ಆಹಾರದ ಮಾಸ ಎಂದು ಘೋಷಣೆ ಮಾಡಿ ಅದಕ್ಕೊಂದು ಅರ್ಥಪೂರ್ಣ ವ್ಯಾಖ್ಯಾನ ಕೂಡ ಮಾಡಿದ್ದಾರೆ. ನಾವು ತಿನ್ನುವ ಪೌಷ್ಠಿಕ ಆಹಾರವು ನಮ್ಮ ಮಾನಸಿಕ, ಬೌದ್ಧಿಕ ಬೆಳೆವಣಿಗೆಗೆ ಪೂರಕವಾಗಿರುತ್ತದೆ. ಈ ಪೌಷ್ಠಿಕ ಆಹಾರ ಸೇವೆಯ ಅಭಿಯಾನದಲ್ಲಿ ಸಾರ್ವಜನಿಕ ಸಹಭಾಗಿತ್ವ ಬಹಳ ಮುಖ್ಯ ಎಂದಿದ್ದಾರೆ.
ಆಹಾರ ಸೇವನೆ ಕಡ್ಡಾಯ
ಈ ಹಿಂದೆ ಹಲವಾರು ಬಾರಿ ನಾವು ಇಂತಹ ಪೌಷ್ಠಿಕ ಅಭಿಮಾನಗಳನ್ನು ಸಾಕಷ್ಟು ಬಾರಿ ಹಮ್ಮಿಕೊಂಡಿದ್ದೇವೆ. ಆದರೆ ಈ ಬಾರಿ ಮಾತ್ರ ಶಾಲಾ ಹಂತದಲ್ಲಿ ಕ್ಲಾಸಿನ ಮಾನಿಟರ್ ಒಬ್ಬರು ನೋಡಿಕೊಳ್ಳುವ ರೀತಿಯಲ್ಲಿಯೇ ಪೌಷ್ಠಿಕ ಆಹಾರದ ಸೇವನೆಯ ಬಗ್ಗೆ ಉಸ್ತುವಾರಿ ಮಾಡುವ ಅಗತ್ಯವಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ತರಗತಿಯ ಮಾರ್ಕ್ಸ್ ಇರುವ ರೀತಿಯಲ್ಲಿಯೇ ಪೌಷ್ಠಿಕ ಆಹಾರ ಸೇವನೆಯು ಅಗತ್ಯವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೇಶದ ಪ್ರತಿ ಜಿಲ್ಲೆಗೂ ಭಾರತೀಯ ಕೃಷಿ ಪೋಷಣ್ ಕೋಶ ಎಂಬ ಸಂಸ್ಥೆಯು ಪೌಷ್ಠಿಕ ಆಹಾರದ ಮಾಹಿತಿ ಹಾಗೂ ಅಗತ್ಯವಾದ ಪೌಷ್ಠಿಕ ವಸ್ತುಗಳ ಕುರಿತಂತೆ ಮಾಹಿತಿ ನೀಡಲು ನಿಯೋಜನೆ ಮಾಡಲಾಗಿದೆ. ಸೆಪ್ಟಂಬರ್ ತಿಂಗಳು ಪೌಷ್ಠಿಕ ಆಹಾರದ ಮಾಸ ಯೋಜನೆಯ ಅನುಷ್ಠಾನದ ಹೊಣೆಯನ್ನು ಹೊತ್ತುಕೊಂಡು ನಿಭಾಯಿಸಲಿದೆ. ನಮ್ಮ ದೇಹ ಮತ್ತು ಮನಸ್ಸಿಗೆ ಮುದ ನೀಡುವ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಪ್ರತಿಯೊಬ್ಬರ ಆರೋಗ್ಯ ಸ್ವ ಸಾಮರ್ಥ್ಯದಿಂದ ಶಕ್ತಿದಾಯಕವಾಗಬೇಕು ಎಂಬ ಆಶಯ ನಮ್ಮದು ಎಂದು ಪ್ರಧಾನ ಮಂತ್ರಿಗಳು ತಿಳಿಸಿದರು.
ಪೌಷ್ಟಿಕ ಆಹಾರ ಎಂದರೆ ಅದೊಂದು ಪ್ರಾಕೃತಿಕ ವಿಜ್ಞಾನ ಇದ್ದ ಹಾಗೆ. ದೈಹಿಕ ಸದೃಡತೆ ಹಾಗೂ ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಪೌಷ್ಠಿಕತೆ ಆಹಾರ ಸೇವನೆಯೂ ಬಹಳ ಮುಖ್ಯ.
ಲಾ ರಫ್ಕೋಲ್ಡ್ ಹೇಳಿರುವಂತೆ, ಆಹಾರ ತಿನ್ನಬೇಕಾದ ಅನಿವಾರ್ಯ ಇದೆ ನಿಜ. ಆದರೆ ತಿನ್ನುವುದೂ ಕೂಡ ಒಂದು ಬುದ್ಧಿವಂತಿಕೆ ಹಾಗೂ ಕಲೆ ಎಂದು ಹೇಳಿದ್ದಾರೆಂಬುದನ್ನು ಗಮನಿಸಬೇಕಾಗಿದೆ ಎಂದು ಮೋದಿ ಹೇಳಿದ್ದಾರೆ.
ನಮ್ಮ ದೇಹವು ಶಕ್ತಿದಾಯಕವಾಗಲು ಆಹಾರ ಸೇವನೆ ತೀರಾ ಅಗತ್ಯ, ಆದರೆ ತೆಗೆದುಕೊಳ್ಳುವ ಆಹಾರದಲ್ಲಿ ಕಾರ್ಬೋಹೈಡ್ರೇಟ್,ಪ್ರೊಟೀನ್,ಕಬ್ಬಿಣ ಅಂಶ ಉಳ್ಳ ಆಹಾರ, ವಿಟಮಿನ್ಸ್ ಹಾಗೂ ನೀರು ಸಮತೋಲನವಾಗಿರಬೇಕು. ಪೌಷ್ಠಿಕತೆ ಜೊತೆಯಲ್ಲೇ ಗುಣಮಟ್ಟದಿಂದ ಕೂಡ ಆಹಾರ ದೇಹವನ್ನು ಸದೃಢವಾಗಿರಿಸುತ್ತದೆ. ಅದಕ್ಕಾಗಿ ಪೌಷ್ಠಿಕ ಆಹಾರವನ್ನು
ಪ್ರಮುಖವಾಗಿ ಎರಡು ವಿಧಾನಗಳಲ್ಲಿ ಗುರುತಿಸಲಾಗಿದೆ.
ಪ್ರಮುಖ ಎರಡು ವಿಧಾನಗಳು
ಪ್ರತಿಯೊಬ್ಬರೂ ಪ್ರಾಥಮಿಕವಾಗಿ ಕಾರ್ಬೋಹೈಡ್ರೇಟ್ ,ಪ್ರೊಟೀನ್,ಕಬ್ಬಿಣ ಅಂಶ ಉಳ್ಳ ಆಹಾರವನ್ನು ತೆಗೆದುಕೊಳ್ಳಬೇಕು. ನಂತರ ಎರಡನೇ ಹಂತದಲ್ಲಿ ಎ ಬಿ ಸಿ ಡಿ ಇ, ಕೆ ಮತ್ತು
ಬಿ ವಿಟಮಿನ್ ಅಂಶಗಳನ್ನು ಒಳಗೊಂಡ ಶಕ್ತಿಯುತ ಆಹಾರದ ಜೊತೆಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಅಂಶ, ಮಿನರಲ್ಸ್ ಯುಕ್ತ ಆಹಾರ ಸೇವನೆ ಮಾಡಬೇಕು. ದೇಹಕ್ಕೆ ಅಗತ್ಯವಾಗಿ 6 ಕನಿಷ್ಠ ಪೌಷ್ಠಿಕ ಆಹಾರಗಳು ಸಿಗುತ್ತಿದ್ದರೆ ಅಪೌಷ್ಠಿಕತೆ ಮಾಯವಾಗುತ್ತದೆ. ಕೆಲವೊಮ್ಮೆ ಉಪವಾಸ ಇರುವುದರಿಂದಲೂ ನಾವು ದೇಹವನ್ನು ಸಮತೋಲದಲ್ಲಿ ಇಟ್ಟುಕೊಳ್ಳುವ ಸದೃಢತೆ ಹೊಂದುವ ಸಾಧ್ಯತೆ ಇದೆ.
ದೇಹ ಎನ್ನುವುದು ಒಂದು ಕಟ್ಟಡ ಇದ್ದಂತೆ. ಈ ಕಟ್ಟಡದ ಭದ್ರತೆಗೆ ಪ್ರೊಟೀನ್ ಅಗತ್ಯ. ಹೆಚ್ಚು ಪ್ರಮಾಣದಲ್ಲಿ ಪ್ರೊಟೀನ್ ವಸ್ತುಗಳನ್ನು ಸೇವನೆ ಮಾಡುವುದರಿಂದ ದೇಹ ಕಟ್ಟಡದ ಮಾದರಿಯಲ್ಲಿ ಮತ್ತಷ್ಟು ಭದ್ರವಾಗಿರುತ್ತದೆ. ಮೊಟ್ಟೆ, ಮಾಂಸ, ಚೀಜ್, ಹಾಲು, ಬೆಣ್ಣೆಯಂತಹ ವಸ್ತುಗಳು ಪೋಟಿನ್ಯುಕ್ತವಾಗಿರುತ್ತವೆ.
ದೇಹವನ್ನು ಮಾತ್ರ ಸದೃಢ ಮಾಡಿದರೆ ಮಾತ್ರ ಸಾಲದು. ಮನಸ್ಸು ಮತ್ತು ಬುದ್ಧಿಯನ್ನೂ ಕೂಡ ಸಮಾನಾಂತರವಾಗಿ ಬೆಳೆಸುವ ಅಗತ್ಯವಿದೆ. ಅದಕ್ಕಾಗಿ ಕಾರ್ಬೋಹೈಡ್ರೇಟ್ ಆಹಾರಗಳು ಸಾಕಷ್ಟು ಪರಿಣಾಮಕಾರಿ. ಮನಸ್ಸು ಮತ್ತು ಬುದ್ದಿಗೆ ಅಗತ್ಯವಿರುವ ಸಾಮರ್ಥ್ಯ ಉತ್ಪಾದಿಸುವ ಶಕ್ತಿಯೂ ಕೂಡ ಇಂತಹ ಆಹಾರದಲ್ಲಿ ಅಡಗಿದೆ. ಅನ್ನ, ಚಪಾತಿ, ಬ್ರೆಡ್
ದ್ವಿದಳ ಧಾನ್ಯಗಳು ಹೆಚ್ಚು ಪ್ರಮಾಣದಲ್ಲಿ ಬಳಕೆ ಮಾಡುವುದರಿಂದ ನಾವು ಹೆಚ್ಚು ಪೌಷ್ಠಿಕ ಆಹಾರ ಸೇವೆ ಮಾಡಿದಂತಾಗುತ್ತದೆ.
ಸದೃಢವಾದ ಮನಸ್ಸು ಮತ್ತು ದೇಹ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಮನಸ್ಸು ಮತ್ತು ದೇಹ ಒಂದೇ ನಾಣ್ಯದ ಎರಡು ಜನನ ಇದ್ದಂತೆ. ದೇಹದಲ್ಲಿ ವ್ಯತ್ಯಾಸವಾದರೆ ಮನಸ್ಸು ಕೆಡುತ್ತದೆ. ಮನಸ್ಸಿನಲ್ಲಿ ವ್ಯತ್ಯಾಸವಾದರೆ ದೇಹದ ಆರೋಗ್ಯ ಕೆಡುತ್ತದೆ. ಹೀಗಾಗಿ ಪೌಷ್ಠಿಕ ಆಹಾರ ಮತ್ತು ವ್ಯಾಯಾಮ ಮನುಷ್ಯನ ಬೆಳವಣಿಗೆ ಪೂರಕವಾಗಿರುತ್ತವೆ ಎನ್ನುವುದು ಪೌಷ್ಠಿಕ ಮಾಸಾಚರಣೆಯ ಒಟ್ಟಾರೆ ಅಭಿಪ್ರಾಯವಾಗಿದೆ.
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ