ನೆಟ್ಟ ಸಸಿಗಳ ಆಡಿಟ್ ಗೆ ಸೂಚನೆ : ಮಂಡ್ಯ, ಕೊಪ್ಪಳ ಪ್ರಗತಿ ಕ್ಷೀಣ

Team Newsnap
1 Min Read

*ಸಚಿವ ಖಂಡ್ರೆ ಅಸಮಾಧಾನ

ಬೆಂಗಳೂರು: ಈ ಸಾಲಿನ ವನಮಹೋತ್ಸವದಲ್ಲಿ ರಾಜ್ಯಾದ್ಯಂತ ನೆಡಲಾಗಿರುವ ನಾಲ್ಕುಮುಕ್ಕಾಲು ಕೋಟಿಗೂ ಹೆಚ್ಚು ಸಸಿಗಳ ಪೈಕಿ ಎಷ್ಟು ಸಸಿಗಳು ಬದುಕುಗಳಿದಿವೆ ಎಂಬ ಬಗ್ಗೆ ಈಗಿನಿಂದಲೇ ಸಮೀಕ್ಷಾ ಕಾರ್ಯ ಆರಂಭಿಸುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಕಂಡ್ರೆ ಸೂಚಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲೆಗಳ ವಲಯ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು ಮಂಡ್ಯ, ಕೊಪ್ಪಳ ಜಿಲ್ಲೆಗಳಲ್ಲಿ ನಿರೀಕ್ಷಿತ ಗುರಿ ಸಾಧನೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತತ್ ಕ್ಷಣವೇ ಹಿಂಗಾರು ಮಳೆ ಆರಂಭವಾಗುತ್ತಿದ್ದಂತೆ ಸಸಿಗಳನ್ನು ನೆಟ್ಟು ಪೋಷಿಸುವಂತೆ ಆದೇಶಿಸಿದರು.

ರಾಜ್ಯದ ಹಸಿರು ವಲಯ ವ್ಯಾಪ್ತಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಈ ವರ್ಷ 5 ಕೋಟಿ ಸಸಿಗಳನ್ನು ನೆಡುವ ಗುರಿ ಹಮ್ಮಿಕೊಳ್ಳಲಾಗಿದ್ದು, 4.8 ಲಕ್ಷ ಸಸಿ ನೆಡಲಾಗಿದೆ, ಇದನ್ನು ಯಶಸ್ವಿಯಾಗಿ ಪಾಲನೆ ಮಾಡಿ ಎಂದು ಸೂಚಿಸಿದರು.
ಅರಣ್ಯ ಇಲಾಖೆ ನೆಟ್ಟಿರುವ ಸಸಿಗಳ ಜೊತೆಗೆ ರೈತರಿಗೆ ಹಂಚಿಕೆ ಮಾಡಲಾಗಿರುವ ಸಸಿಗಳನ್ನು ನೆಡಲಾಗಿದೆಯೇ ಎಂಬ ಬಗ್ಗೆಯೂ ನೈಜ ಆಡಿಟ್ ಮಾಡಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸೆ. 23 ರಂದು ಮಂಡ್ಯ ಬಂದ್ : ನೀರಿನ ಸಂರಕ್ಷಣೆ ಹೇಗೆ ? ರಾಜ್ಯದ ಮುಂದಿನ ಆಯ್ಕೆಗಳೇನು?

ಸಸಿಗಳನ್ನು ನೆಟ್ಟರಷ್ಟೇ ಸಾಲದು, ಮೂರು ವರ್ಷಗಳ ಕಾಲ ಅವುಗಳ ಪಾಲನೆ ಪೋಷಣೆ ಮಾಡಿದರೆ ಅವು ಸ್ವತಂತ್ರವಾಗಿ ಬೆಳೆಯುತ್ತವೆ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.

Share This Article
Leave a comment