ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಸಂಡಿಗೆಗಳೇ,
ಕಡುಬು, ಹೋಳಿಗೆ, ಕಜ್ಜಾಯ, ಕರ್ಜಿಕಾಯಿಗಳೇ,
ಬೆಣ್ಣೆ, ತುಪ್ಪ, ಹಾಲು, ಮೊಸರುಗಳೇ,
ಮುದ್ದೆ, ರೊಟ್ಟಿ, ಚಪಾತಿ, ಪೀಜಾ, ಬರ್ಗರ್ ಗಳೇ,
ಚಿಕನ್, ಮಟನ್, ಫಿಶ್, ಪೋರ್ಕ್, ಭೀಫ್ ಗಳೇ,
ಸೀರೆ, ಲಂಗ, ಬುರ್ಖಾ, ಜೀನ್ಸ್, ಚೂಡಿದಾರ್ ಗಳೇ,
ಪ್ಯಾಂಟ್, ಷರ್ಟ್, ಪಂಚೆ, ಲುಂಗಿ, ಪೈಜಾಮಾಗಳೇ,
ಹರಿಶಿನ, ಕುಂಕುಮ, ವಿಭೂತಿ, ಧೂಪ, ಪರ್ ಪ್ಯೂಮ್ ಗಳೇ,
ರೋಜಾ, ಮಲ್ಲಿಗೆ, ಸಂಪಿಗೆ, ಸೇವಂತಿಗೆ, ಕಾಕಡಾಗಳೇ,
ಒಂದು ಜಡೆ, ಎರಡು ಜಡೆ, ಬಾಬ್ ಕಟ್, ಹೇರ್ ಕಟ್ ಗಳೇ,
ಗೌಡ, ಲಿಂಗಾಯತ, ದಲಿತ, ಬ್ರಾಹ್ಮಣ, ಕುರುಬ, ಹಿಂದುಳಿದ ವರ್ಗಗಳೇ,
ಶಿಯಾ, ಸುನ್ನಿ, ಕ್ಯಾಥೋಲಿಕ್, ಪ್ರಾಟೆಸ್ಟೆಂಟ್, ಜೈನ, ಬೌದ್ಧ, ಪಾರ್ಸಿ, ಯಹೂದಿಗಳೇ,
ಕರಿಯ, ಬಿಳಿಯ, ಕೆಂಚ, ಗೋದಿ ಮೈ ಬಣ್ಣಗಳೇ,
ಶಿವ, ಜೀಸಸ್, ಪೈಗಂಬರ್, ಗುರುನಾನಕ್, ಬುದ್ದ, ಮಾಹಾವೀರರುಗಳೇ,
ರಾಮ,ಇಮ್ರಾನ್, ಜೇಕಬ್, ಸರ್ದಾರ್, ಪಠಾಣ್, ಠಾಕೂರ್ ಗಳೇ,
ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಸಂಸ್ಕೃತಗಳೇ,
ಕಣ್ಣು, ಕಿವಿ, ಮೂಗು, ಬಾಯಿ, ಕಿಡ್ನಿ, ಹೃದಯಗಳೇ,
ಬಿಪಿ, ಶುಗರ್, ಕ್ಯಾನ್ಸರ್, ಏಡ್ಸ್, ಕೊರೋನಾ ವೈರಸ್ ಗಳೇ,
ಡಾಕ್ಟರ್, ಆಕ್ಟರ್, ಬೆಗ್ಗರ್, ಮಿನಿಸ್ಟರ್, ರಾಬರ್ಸಗಳೇ,
ಅಪ್ಪ, ಅಮ್ಮ, ಅಣ್ಷ, ತಮ್ಮ, ತಂಗಿ, ಬಂಧುಗಳೇ,……………
ಪ್ರಕೃತಿಯಲ್ಲಿ ಎಲ್ಲಾ ಒಂದೇ ಕಣ್ರಯ್ಯಾ,
ಇಲ್ಲಿ ಯಾವುದೂ ಸೃಷ್ಟಿಸಲು ಸಾಧ್ಯವಿಲ್ರಯ್ಯ,
ಯಾವುದೂ ನಾಶ ಮಾಡಲು ಸಾಧ್ಯವಿಲ್ರಯ್ಯ,
ರೂಪ ಆಕಾರ ಗುಣಗಳು ಮಾತ್ರ ಬೇರೆಯಾಗಿರುತ್ತದ್ರಯ್ಯ,
ತಾರತಮ್ಯ ಎಲ್ಲಾ ನಿಮ್ಮ ಭ್ರಮೆಯಯ್ಯ,
ಇಷ್ಟು ಸರಳ ವಿಷಯ ಅರ್ಥವಾಗಲು ಸಹಸ್ರಾರು ವರ್ಷ ಬೇಕೇನ್ರಯ್ಯ,
ಆದರೂ ನಾವು ಹೇಳಿಕೊಳ್ಳುತ್ತೇವೆ,
ಮಾನವ ಮುಂದುವರಿದ ನಾಗರೀಕ ಸಮಾಜದ, ಅತ್ಯಂತ ಬುದ್ಧಿವಂತ ಪ್ರಾಣಿಯೆಂದು, ಇದು ನಿಜವೇ ? ನನಗೇಕೊ ಅನುಮಾನ.!! ನಿಮಗೆ ?
ವಿವೇಕಾನಂದ ಹೆಚ್. ಕೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!
ಹೆಂಗರುಳೇ ಕಲ್ಲಾದರೆ ನುಡಿವುದೇನು(ಬ್ಯಾಂಕರ್ಸ್ ಡೈರಿ)