ರೈಲು, ಬಸ್ ಇಲ್ಲವೇ ವಿಮಾನದಲ್ಲಿ ಪ್ರಯಾಣಿಸುವವರು ಸಾಮಾನ್ಯವಾಗಿ ಹಲವರು ಕಣ್ಣುಮುಚ್ಚಿ ನಿದ್ದೆ ಮಾಡುತ್ತಾರೆ ಇಲ್ಲವೇ ಕೆಲವರು ಕಣ್ಣು ಮುಚ್ಚಿದಂತಿದ್ದರೂ ಯೋಚಿಸುತ್ತಿರುತ್ತಾರೆ. ಮತ್ತೆ ಕೆಲವರು ಕೆಲಹೊತ್ತು ಅದೂ ಇದೂ ಓದುತ್ತಾರೆ.
ಈಗಿನದು ಮೊಬೈಲ್ ಯುಗವಾಗಿರುವುದರಿಂದ ಕೈಯಲ್ಲಿ ಮೊಬೈಲ್ ಇಟ್ಟುಕೊಂಡ ಯುವಜನಾಂಗ ಅದರ ವೀಕ್ಷಣೆಯಲ್ಲಿ ಮಗ್ನರಾಗುವುದನ್ನು ನೋಡಬಹುದು.
ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಮಾತ್ರ ವಿಭಿನ್ನ. ಈವರೆಗೆ ವಾರದ ರಜೆ, ತಿಂಗಳ ರಜೆ, ಸಾಂದರ್ಭಿಕ ರಜೆ ಹೀಗೆ ಇರುವ ಯಾವುದೇ ರಜೆಯನ್ನು ಪಡೆಯದೆ ಕಾರ್ಯನಿರ್ವಹಿಸುತ್ತಿದ್ದಾರೆ.
ನಿನ್ನೆ ಅಂದರೆ ಬುಧವಾರ ಮೋದಿ ಅಮೆರಿಕ ಪ್ರವಾಸ ಕೈಗೊಂಡರು. ಈ ವೇಳೆ ಅಂದರೆ ವಿಮಾನದಲ್ಲಿ 10-12 ಗಂಟೆಗಳ ಕಾಲವಾದರೂ ವಿಶ್ರಾಂತಿ ಪಡೆಯುತ್ತಾರೆಂದರೆ, ಅದೂ ಇಲ್ಲ.
ಅವರೇ ಟ್ವೀಟ್‌ನಲ್ಲಿ ಬರೆದಿದ್ದಾರೆ.. “ದೀರ್ಘ ವಿಮಾನ ಪ್ರಯಾಣದ ಇನ್ನೊಂದು ಅರ್ಥವೆಂದರೆ ಕಾಗದ ಪತ್ರಗಳ ಹಾಗೂ ಇತರ ಕಡತಗಳ ಕಾರ್ಯವನ್ನು ನಿರ್ವಹಿಸಲು ದೊರೆಯುವ ಸದವಕಾಶ ಎಂದು.
ವಿಮಾನ ಪ್ರಯಾಣದ ಸಮಯದಲ್ಲಿ ಕಡತಗಳನ್ನು ಪರಿಶೀಲನೆ ಮಾಡುತ್ತಿರುವ ಚಿತ್ರವೊಂದನ್ನು ಪ್ರಧಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಸಹಜವಾಗಿ ಮೋದಿ ಅಭಿಮಾನಿಗಳಿಗೆ ರೋಮಾಂಚನ ತಂದಿದೆ. ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
ಬಿರ್ಲಾ ಪ್ರೆಸಿಷನ್ಸ್ ಟೆಕ್ನಾಲಜಿಯ ಮುಖ್ಯಸ್ಥ ವೇದಾಂತ ಬಿರ್ಲಾ ತಮ್ಮ ಟ್ವೀಟ್‌ನಲ್ಲಿ…” ನಿಮ್ಮ ಕಠಿಣ ಶ್ರಮ ಇಂದಿನ ಯುವಕರಿಗೆ ಸ್ಪೂರ್ತಿ….’ ಎಂದು ಶ್ಲಾಘಿಸಿದ್ದಾರೆ.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ