ರಾಜ್ಯದ ಒಂದಿಂಚೂ ಜಾಗ ಮಹಾರಾಷ್ಟ್ರಕ್ಕೆ ಹೋಗುವುದಿಲ್ಲ : ಸಚಿವ ಜೋಶಿ

Team Newsnap
1 Min Read

ನಮ್ಮ ರಾಜ್ಯದ ಒಂದಿಂಚೂ ಜಾಗ ಮಹಾರಾಷ್ಟ್ರ ಕ್ಕೆ ಕೊಡುವುದಿಲ್ಲ. ಅದೇ ರೀತಿ ಮಹಾರಾಷ್ಟ್ರದ ಒಂದಿಂಚೂ ಜಾಗ ಕರ್ನಾಟಕಕ್ಕೆ ಬರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಜೋಶಿ ಅವರು, ಗಡಿ ವಿಚಾರ ಮುಗಿದು ಹೋದ ಅಧ್ಯಾಯ. ಮಹಾರಾಷ್ಟ್ರದವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ವಿವಾದಾತ್ಮಕ ಹೇಳಿಕೆಗಳನ್ನು ಕೊಡದಂತೆ ಮಹಾರಾಷ್ಟ್ರದ ನಮ್ಮ ಪಕ್ಷದ ಶಾಸಕರಿಗೆ ಹೇಳಿದ್ದೇನೆ. ನಮ್ಮ ರಾಜ್ಯದಲ್ಲಿ ಮರಾಠಿಗರು ಕನ್ನಡಿಗರ ಜೊತೆ ಹೊಂದಾಣಿಕೆಯಿಂದ ಇದ್ದಾರೆ. ಇಲ್ಲಿ ಯಾರಿಗೂ ತೊಂದರೆ ಇಲ್ಲ ಎಂದರು.ಇಂಡುವಾಳು ಸಚ್ಚಿ ಬಿಜೆಪಿಗೆ ಸೇರ್ಪಡೆ; ಮಂಡ್ಯದ 7 ಕ್ಷೇತ್ರಗಳಲ್ಲಿ ಗೆಲುವು ಖಚಿತ- ಸಚಿವ ನಾರಾಯಣಗೌಡ

ಮಹಾರಾಷ್ಟ್ರ, ಸೊಲ್ಲಾಪುರ, ಸಾಂಗ್ಲಿ, ಕೊಲ್ಲಾಪುರದಲ್ಲಿ ಕನ್ನಡಿಗರು ಸಂತೋಷದಿಂದ ಇದ್ದಾರೆ ಎಂದ ಅವರು, ಸಮಸ್ಯೆಗಳಿದ್ದರೆ ಆಯಾ ರಾಜ್ಯ ಸರ್ಕಾರಗಳ ಜೊತೆ ಮಾತನಾಡಿಕೊಳ್ಳಬೇಕು. ನಮ್ಮ ದೇಶ ಒಂದೇ. ನಾವು ಚೀನಾ, ಪಾಕಿಸ್ತಾನದ ಹೊತೆ ಹೋರಾಡಬೇಕು. ಅದರ ಬದಲಾಗಿ ಕರ್ನಾಟಕ, ಮಹಾರಾಷ್ಟ್ರ ಎಂದು ಬಡಿದಾಡುತ್ತಿರುವುದು ದೌರ್ಭಾಗ್ಯ ಎಂದರು.

ಈ ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿದೆ. ಎರಡೂ ರಾಜ್ಯಗಳಿಗೆ ನ್ಯಾಯಯುತವಾಗಿ ನ್ಯಾಯಾಲಯ ತೀರ್ಪು ಕೊಡುತ್ತದೆ ಎಂದು ಜೋಶಿ ಹೇಳಿದರು.

Share This Article
Leave a comment