ಸೂರ್ಯಕಾಂತಿ ಮತ್ತು ಕಡಲೆಕಾಯಿ ಎಣ್ಣೆಯಲ್ಲಿ ಸೂರ್ಯಕಾಂತಿಯೂ ಇಲ್ಲ, ಕಡಲೆ ಬೀಜವೂ ಇಲ್ಲ: ಶೋಭಾ ಕರಂದ್ಲಾಜೆ

Team Newsnap
1 Min Read
No sunflower, no peanut in sunflower and peanut oil: Shobha Karandlaje

ನೀವು ತಿನ್ನುತ್ತಿರುವ ಸೂರ್ಯಕಾಂತಿ ಮತ್ತು ಕಡಲೆಕಾಯಿ ಎಣ್ಣೆಯಲ್ಲಿ ಸೂರ್ಯಕಾಂತಿಯೂ ಇಲ್ಲ, ಕಡಲೆ ಬೀಜವೂ ಇಲ್ಲ. ಈ ವಿಷಯದಲ್ಲಿ ಭಾರತ ಸ್ವಾವಲಂಬಿ ಆಗಬೇಕು ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಇದನ್ನು ಓದಿ –ಮಂಡ್ಯದ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಭೇಟಿ

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರಂದ್ಲಾಜೆ,ಮಲೇಷ್ಯಾ ಹಾಗೂ ಇಂಡೋನೇಷ್ಯಾದಿಂದ ಪಾಮ್​ ಆಯಿಲ್​ ಬರುತ್ತದೆ.ಶೇ.70 ಅಡುಗೆ ತೈಲ ವಿದೇಶದಿಂದ ಆಮದಾಗುತ್ತಿದೆ ಎಂದು ಹೇಳಿದರು.

ಆಮದಾಗುತ್ತಿರುವ ಪಾಮ್​ ಆಯಿಲ್​ ನ್ನು ಭಾರತದಲ್ಲಿ ರಿಫೈನ್​ ಮಾಡಿ ಬೇರೆ ಬೇರೆ ಲೇಬಲ್​ ಅಂಟಿಸಿ ಮಾರಾಟ ಮಾಡಲಾಗುತ್ತಿದೆ. ತೈಲ ಬೆಳೆಗಳಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಖಾದ್ಯ ತೈಲದ ವಿಷಯದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

ನಮ್ಮದು ಕೃಷಿ ಆಧಾರಿತ ದೇಶವಾಗಿದ್ದು, ಶೇ.90 ಸಣ್ಣ ಹಾಗೂ ಮಧ್ಯಮ ಕೃಷಿಕರಿದ್ದಾರೆ. ದೇಶದಲ್ಲಿ ನಗರಕ್ಕೆ ಹತ್ತಿರವಿರುವ ಭೂಮಿಗಳು ಸೈಟ್​ಗಳಾಗುತ್ತಿವೆ. ಆದ್ದರಿಂದ ಸಣ್ಣ ಹಾಗೂ ಮಧ್ಯಮ ಕೃಷಿಕರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಸಂಘಗಳನ್ನು ಮಾಡಿದೆ. ವರ್ಷಕ್ಕೆ ತಲಾ 6 ಸಾವಿರ ರೂ.ಗಳನ್ನು ನೇರವಾಗಿ ರೈತರ ಖಾತೆಗೆ ಹಾಕುತ್ತಿದೆ ಎಂದರು.

ನಮ್ಮ ಉದ್ದೇಶ ಕೇವಲ ಕೃಷಿ ಮಾಡುವುದಲ್ಲ, ಅದನ್ನು ಮಾರಾಟ ಮಾಡುವ ತಂತ್ರ ಕಲಿಸುವುದು, ಮುಂದಿನ ಎರಡು ವರ್ಷಗಳಲ್ಲಿ ರಸಗೊಬ್ಬರದಲ್ಲಿ ಸ್ವಾವಲಂಬನೆ ಸಾಧಿಸುವುದು ನಮ್ಮ ಗುರಿಯಾಗಿದ್ದು, ಕೃಷಿ ಉತ್ಪನ್ನ ಹೆಚ್ಚಿರುವ ದೇಶಗಳ ಪೈಕಿ ಭಾರತ ಈ ಬಾರಿ 9ನೇ ಸ್ಥಾನದಲ್ಲಿ ಬಂದು ನಿಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.

Share This Article
Leave a comment