ಪಾಕಿಸ್ತಾನದಲ್ಲಿ ಭದ್ರತೆ ಇಲ್ಲ : ಸರಣಿ ಪಂದ್ಯಗಳೇ ರದ್ದು – ತಾಯ್ನಾಡಿಗೆ ಮರಳಿರುವ ನ್ಯೂಜಿಲೆಂಡ್

Team Newsnap
1 Min Read

ಭದ್ರತೆಯ ಭಯ ಕಾಡಿದ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ತಂಡವು ತನ್ನ ಪಾಕಿಸ್ತಾನದ ಪ್ರವಾಸವನ್ನೇ ರದ್ದು ಮಾಡಿದೆ.

ಪಾಕಿಸ್ತಾನದಲ್ಲಿ ಇಂದಿನಿಂದ ನಡೆಯಬೇಕಿದ್ದ ಮೂರು ಏಕದಿನ ಹಾಗೂ 5 ಟಿ-20 ಪಂದ್ಯವನ್ನು ರದ್ದು ನ್ಯೂಜಿಲೆಂಡ್ ಪ್ರವಾಸವನ್ನು ಮೊಟಕುಗೊಳಿಸಿದೆ.

ನ್ಯೂಜಿಲೆಂಡ್ ಸರ್ಕಾರದ ಸೂಚನೆ ಯಿಂದ ಆಟಗಾರರು ಪಾಕ್​ ವಿರುದ್ಧದ ಸರಣಿಯಲ್ಲಿ ಆಡದಿರಲು ನಿರ್ಧರಿಸಿ ನ್ಯೂಜಿಲೆಂಡ್ ಗೆ ವಾಪಸ್ಸು ಮರಳಿಲಿದೆ.

ಪಾಕಿಸ್ತಾನದ ವಿರುದ್ಧ ನ್ಯೂಜಿಲೆಂಡ್ ತಂಡ ಮೂರು ಏಕದಿನ ಪಂದ್ಯ ಹಾಗೂ 5 ಟಿ-20 ಪಂದ್ಯವನ್ನ ಆಡಬೇಕಿತ್ತು.

ಸೆಪ್ಟೆಂಬರ್ 17, 19, 21 ರಂದು ಏಕದಿನ ಪಂದ್ಯಗಳು ಹಾಗೂ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 3 ವರೆಗೆ ಟಿ-20 ಪಂದ್ಯಗಳು ನಡೆಯಲಿದ್ದವು.

ಬೇಡಿಕೊಂಡ ಪಾಕಿಸ್ತಾನದ ಪ್ರಧಾನಿ :

ಸರಣಿ ಮೊಟಕುಗೊಳಿಸುವ ಸಂಬಂಧ ನ್ಯೂಜಿಲೆಂಡ್ ಪಾಕಿಸ್ತಾನಕ್ಕೆ ಸೂಚನೆ ನೀಡಿದೆ.

ಈ ವಿಚಾರ ತಿಳಿಯುತ್ತಿದ್ದಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕೂಡಲೇ, ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರಿಗೆ ಕರೆ ಮಾಡಿ, ಭದ್ರತೆ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. 

ಆದರೆ ಇಮ್ರಾನ್ ಖಾನ್ ಮನವಿಯನ್ನ ನ್ಯೂಜಿಲೆಂಡ್ ಪ್ರಧಾನಿ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.

Share This Article
Leave a comment