December 26, 2024

Newsnap Kannada

The World at your finger tips!

WhatsApp Image 2022 03 28 at 10.40.11 AM

ಅನುಕಂಪ ಗಿಟ್ಟಿಸುವ ಗಿಮಿಕ್ ನಡೆಯಲ್ಲ- MP ಸುಮಲತಾಗೆ ನಿಖಿಲ್ ಕುಮರಸ್ವಾಮಿ ಟಾಂಗ್

Spread the love

ಯಾರೋ ಏನೋ ಅಂದು ಬಿಟ್ಟರು ಅಂತ ಅನುಕಂಪ ಗಿಟ್ಟಿಸುವ ಯಾವಾಗಲೂ ನಡೆಯಲ್ಲ
ಎಂದು ಸಂಸದೆ ಸುಮಲತಾಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.

ಮದ್ದೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ನಿಖಿಲ್, ಬೇರೆಯವರನ್ನು ದೂರುವ ಬದಲು ಸಂಸದರು ಆತ್ಮಾವಲೋಕನ ಮಾಡಿಕೊಳ್ಳಲಿ. ಸಂಸದರಾಗಿ ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಪ್ರಶ್ನೆ ಮಾಡಿಕೊಳ್ಳಲಿ ಎಂದರು.

ಮಂಡ್ಯದ ಶಾಸಕರು ಎರಡು ಮೂರು ಬಾರಿ ಆಯ್ಕೆ ಆಗಿದ್ದಾರೆ, ಅಭಿವೃದ್ಧಿ ಆಗಿಲ್ಲ ಅಂದ್ರೆ, ಶಾಸಕರನ್ನ ಜನರು ಪ್ರಶ್ನೆ ಮಾಡ್ತಾರೆ. ಇವರನ್ನು ಪ್ರಶ್ನೆ ಮಾಡೋರು ಯಾರು..?, ಪ್ರತಿ ಬಾರಿ ಕಾಲು ಕೆರೆದುಕೊಂಡು ಜಗಳ ಹುಟ್ಟುಹಾಕಿ. ಯಾರೋ ಏನೋ ಅಂದ್ಬಿಟ್ರು ಅಂತ ಅನುಕಂಪ ಗಿಟ್ಟಿಸಲು ಆಗಲ್ಲ ಎಂದು ನಿಖಿಲ್ ಟಾಂಗ್ ಕೊಟ್ಟರು.

2024ರ ವರೆಗೂ ಅವರ ಅಧಿಕಾರ ಇದೆ. ಜನಗಳ ಜೊತೆ ನಿಂತು ಕೆಲಸ ಮಾಡಲಿ ಎಂದು ಗರಂ ಆದರು.

Copyright © All rights reserved Newsnap | Newsever by AF themes.
error: Content is protected !!