November 24, 2024

Newsnap Kannada

The World at your finger tips!

vidansoudha

ವಾಹನಗಳ ನೋಂದಣಿ ಫಲಕದ ಮೇಲೆ ಹೆಸರು, ಚಿನ್ನೆ, ಲಾಂಛನ ಹಾಕುವಂತಿಲ್ಲ – ಸರ್ಕಾರಿ ಆದೇಶ

Spread the love

ರಾಜ್ಯದ ಯಾವುದೇ ವಾಹನಗಳ ನೋಂದಣಿ ಫಲಕಗಳ ಮೇಲೆ ನಿಯಮಬಾಹಿರವಾಗಿ ಸಂಘ, ಸಂಸ್ಥೆಗಳ ಹೆಸರು, ಚಿನ್ನೆ, ಲಾಂಛನವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ತೆರವುಗೊಳಿಸುವಂತೆ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಕರ್ನಾಟಕ ರಾಜ್ಯಪತ್ರದಲ್ಲಿ ಸುತ್ತೋಲೆ ಹೊರಡಿಸಿದ್ದಾರೆ.

WhatsApp Image 2022 05 22 at 2.59.05 PM

ವಾಹನಗಳ ನೋಂದಣಿ ಸಂಖ್ಯಾ ಫಲಕಗಳನ್ನು ಕೇಂದ್ರ ಮೋಟಾರು ವಾಹನಗಳ ನಿಯಮದ ಮಾನದಂಡಗಳಿಗೆ ಅನುಗುಣವಾಗಿ ಅಳವಡಿಸಬೇಕಾಗಿರುತ್ತದೆ ಎಂದು ತಿಳಿಸಿದ್ದಾರೆ.

ಖಾಸಗಿ ವಾಹನಗಳು ಸರ್ಕಾರದ ಲಾಂಛನ ಮತ್ತು ಹೆಸರುಗಳನ್ನು ವಾಹನಗಳ ಮೇಲೆ ಪ್ರದರ್ಶಿಸುವುದನ್ನು ನಿರ್ಬಂಧಿಸಲಾಗಿದೆ. ತಮ್ಮ ವಾಹನಗಳ ಮೇಲೆ ಸರ್ಕಾರಿ ಲಾಂಛನ ಅಥವಾ ಹೆಸರುಗಳನ್ನು ಅಳವಡಿಸಬೇಕಾದಲ್ಲಿ, ಕೇಂದ್ರ ಸರ್ಕಾರದಿಂದ ಅನುಮತಿ ಪಡೆದುಕೊಳ್ಳುವುದು ಅವಶ್ಯಕವಾಗಿರುತ್ತದೆ ಎಂದಿದ್ದಾರೆ.

ಇದನ್ನು ಓದಿ : ಫೇಸ್ ಬುಕ್ ನಲ್ಲಿ ಪರಿಚಯ- ಪ್ರೀತಿಯ ನಾಟಕ : ನಾಗಮಂಗಲದ ಯುವಕನಿಗೆ ಯಾಮಾರಿಸಿದ 50ರ ಆಂಟಿ !

ಈ ಬಗ್ಗೆ ಕೋರ್ಟ್ ಆದೇಶ ಕೂಡ ಇದ್ದು, ಸರ್ಕಾರದ ಲಾಂಛನಗಳನ್ನು ಉಪಯೋಗಿಸದಂತೆ ಹಾಗೂ ವಾಹನಗಳ ಮೇಲೆ ನಿಗಮ, ಮಂಡಳಿ ಮತ್ತು ಸಂಸ್ಥೆಗಳ ಹೆಸರುಗಳನ್ನು ಬರೆದ ಯಾವುದೇ ತರಹದ ಫಲಕ ಅಥವಾ ಬರಹಗಳನ್ನು ಅಳವಡಿಸಬಾರದು ಎಂದು ಸ್ಪಷ್ಟ ಆದೇಶ ಮಾಡಿದೆ. ಮಾನ್ಯ ನ್ಯಾಯಾಲಯದ ಆದೇಶದಂತೆ ಸೂಕ್ತ ಕ್ರಮ ತೆಗೆದುಕೊಂಡು, ತ್ವರಿತವಾಗಿ ಅನಧಿಕೃತ ಫಲಕಗಳನ್ನು ತೆರವುಗೊಳಿಸಲು ಮತ್ತು ತೆಗೆದುಕೊಂಡ ಕ್ರಮಗಳ ವಿವರಗಳನ್ನು ಮಾಹಿತಿ ರೂಪದಲ್ಲಿ ನೀಡಲು ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!