ಹೂವಿನ ಹಾರ ಬೇಡ : ಕಾರ್ಯಕರ್ತರ ವಿರುದ್ಧ ಸಿದ್ದರಾಮಯ್ಯ ಗರಂ

Team Newsnap
1 Min Read

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಳೆದ ಮೂರು ದಿನಗಳಿಂದ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಪ್ರವಾಸದಲ್ಲಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ.

ವಿಜಯಪುರ ಜಿಲ್ಲೆಯ ಪ್ರವಾಸದಲ್ಲಿದ್ದಾಗ ಕಾಂಗ್ರೆಸ್​ ಕಾರ್ಯಕರ್ತರ ವಿರುದ್ಧ ಸಿದ್ದರಾಮಯ್ಯ ಗರಂ ಆಗಿರುವ ಘಟನೆ ನಡೆದಿದೆ.ಇದನ್ನು ಓದಿ –ಮೆಕ್ಸಿಕೊ: ನೌಕಾಪಡೆಯ 14 ಸಿಬ್ಬಂದಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವು 

ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಹೂವಿನ ಹಾರ ತಂದಿದ್ದರು. ಮಹಿಳೆಯರು ಕೂಡ ತಮ್ಮ ಕೈಯಲ್ಲಿ ಹೂವಿನ ಹಾರ ಹಿಡಿದುಕೊಂಡಿದ್ದರು.

ಹಾರವನ್ನು ಸಿದ್ದರಾಮಯ್ಯನವರ ಬಳಿಗೆ ತರುತ್ತಿದ್ದಂತೆಯೇ ಅವರು, ಏಯ್​, ದೂರ ಹೋಗಿ, ಅವುಗಳಲ್ಲಿ ಹುಳುಗಳು ಇರುತ್ತವೆ, ನನ್ನ ಬಳಿ ತರಬೇಡಿ ಎಂದಿದ್ದಾರೆ. ಆದರೂ ಕಾರ್ಯಕರ್ತರು ಹೂವಿನ ಹಾರ ಹಿಡಿದು ಬಂದಾಗ ಸಿದ್ದರಾಮಯ್ಯ ಸ್ವಲ್ಪ ಗರಂ ಆಗಿಯೇ ಕೈ ಮುಗಿದು ಹೂವಿನ ಹಾರ ಬೇಡ ಎಂದು ನಿರಾಕರಿಸಿದರು.

ನೇಕಾರರ ಸಂಘದವರು ಮನವಿ ಪತ್ರ ಕೊಡಲು ಹೋದಾಗ, ಇನ್ನೊಮ್ಮೆ ನಮ್ಮ ಸರ್ಕಾರ ಬಂದ್ರೆ ನೇಕಾರರ ವಿದ್ಯುತ್ ಬಿಲ್ ಮನ್ನಾ ಮಾಡ್ತೀನಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನಿಮ್ಮ ಸಾಲವನ್ನು ಜೀರೋ ಮಾಡ್ತಿನಿ. ಪಕ್ಷದ ಪ್ರಣಾಳಿಕೆಯಲ್ಲಿ ನೇಕಾರರ ಸಾಲ ಮನ್ನಾ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಆಸೆ ಬಿಚ್ಚಿಟ್ಟಿದ್ದಾರೆ.

ರಸ್ತೆ ವಿಚಾರವಾಗಿ ಮನವಿ ಸಲ್ಲಿಸಲು ಗ್ರಾಮಸ್ಥರೊಬ್ಬರು ಬಂದಾಗ, ಸಿದ್ದರಾಮಯ್ಯ, ನೋಡಿ ಈ ಸರ್ಕಾರ ನಿಮಗೆ ಏನೂ ಮಾಡಲ್ಲ. ನಮ್ಮ ಸರ್ಕಾರ ಬಂದಾಗ ಹೇಳಯ್ಯ, ಎಲ್ಲಾ ವ್ಯವಸ್ಥೆ ಮಾಡಿಸುವೆ ಎಂದರು. ಇದೇ ವೇಳೆ `ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬ್ರಿಗೆ ಜೈ’ ಎಂಬ ಘೋಷಣೆಗಳು ಮೊಳಗಿದವು.

Share This Article
Leave a comment