November 15, 2024

Newsnap Kannada

The World at your finger tips!

no entry , temple , kerala

No entry to Sabarimale if you carry photos of stars, politicians - Verdict ಶಬರಿಮಲೆಗೆ ಸ್ಟಾರ್‌ಗಳು, ರಾಜಕಾರಣಿಗಳ ಫೋಟೋ ಹೊತ್ತು ಕೊಂಡು ಹೋದರೆ ಪ್ರವೇಶವಿಲ್ಲ - ತೀರ್ಪು

ಶಬರಿಮಲೆಗೆ ಸ್ಟಾರ್‌ಗಳು, ರಾಜಕಾರಣಿಗಳ ಫೋಟೋ ಹೊತ್ತು ಕೊಂಡು ಹೋದರೆ ಪ್ರವೇಶವಿಲ್ಲ – ತೀರ್ಪು

Spread the love

ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಫಿಲಂ ಸ್ಟಾರ್, ರಾಜಕಾರಣಿಗಳ ಫೋಟೋ, ಪೋಸ್ಟರ್ ತೆಗೆದುಕೊಂಡು ಹೋಗುವಂತಿಲ್ಲ.

ಕೇರಳ ಹೈಕೋರ್ಟ್ ಈ ಆದೇಶ ಹೊರಡಿಸಿ , ದೇವರ ಪೂಜಿಸುವ ಹಕ್ಕು ಸಂಪ್ರದಾಯಕ್ಕೆ ಅನುಗುಣವಾಗಿ ಇರಬೇಕು. ಯಾತ್ರಾರ್ಥಿಗಳು ಸೆಲಿಬ್ರೆಟಿಗಳ ಫೋಟೋ ಅಥವಾ ಪೋಸ್ಟರ್ ತೆಗೆದುಕೊಂಡು ಹೋಗುವಂತಿಲ್ಲ ಎಂದು ಈ ಬಗ್ಗೆ ಟ್ರಾವಂಕೂರು ದೇವಸ್ವಂ ಬೋರ್ಡ್​ಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಎಲ್ಲಾ ಭಕ್ತಾದಿಗಳು ಶಬರಿಮಲೆಯ ಸಂಪ್ರದಾಯಕ್ಕೆ ಅನುಗುಣವಾಗಿ ದರ್ಶನ ಪಡೆಯಲಿ ಎಂದು ಹೇಳಿದೆ.

ಇದನ್ನು ಓದಿ –ಕೊಟ್ಟಿಗೆಗೆ ಚಿರತೆ ದಾಳಿ- 6 ಕೊಂದು 4 ಮೇಕೆಗಳನ್ನು ಹೊತ್ತೊಯ್ದ ಚಿರತೆ

ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಡ್ರಮ್ಮರ್ ಅಥವಾ ಬೇರೆ ಸಂಗೀತ ಉಪಕರಣ ಬಳಸುವಂತಿಲ್ಲ. ಆದರೆ ಇತ್ತೀಚಿಗೆ ಶಬರಿಮಲೆಯಲ್ಲಿ ಡ್ರಮ್ಮರ್ ಶಿವಮಣಿ ಡ್ರಮ್ಮರ್ ಬಳಸಿದ್ದರು. ಹೀಗಾಗಿ ಕೇರಳ ಹೈಕೋರ್ಟ್ ಸುಮೋಟೋ ಪ್ರಕರಣ ದಾಖಲಿಸಿಕೊಂಡಿತ್ತು.

Copyright © All rights reserved Newsnap | Newsever by AF themes.
error: Content is protected !!