ಕೊಟ್ಟಿಗೆಗೆ ಚಿರತೆ ದಾಳಿ- 6 ಕೊಂದು 4 ಮೇಕೆಗಳನ್ನು ಹೊತ್ತೊಯ್ದ ಚಿರತೆ

Team Newsnap
1 Min Read
Leopard attack on Bhadravati laborer in Mandya ಮಂಡ್ಯದಲ್ಲಿ ಭದ್ರಾವತಿ ಕೂಲಿ ಕಾರ್ಮಿಕನ ಮೇಲೆ ಚಿರತೆ ದಾಳಿ

ಕುರಿ ಕೊಟ್ಟಿಗೆಗೆ ನುಗ್ಗಿದ ಚಿರತೆಗಳು 6 ಮೇಕೆಗಳನ್ನು ಕೊಂದು ಅದರಲ್ಲಿ 4 ಮೇಕೆಗಳನ್ನು ಹೊತ್ತು ಹೊಯ್ದುರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಗಿರಿಯಾರಹಳ್ಳಿಯಲ್ಲಿ ಜರುಗಿದೆ.

WhatsApp Image 2023 01 09 at 1.23.12 PM

ಭಾನುವಾರ ರಾತ್ರಿ ಗಿರಿಯಾರಗಳ್ಳಿಯ ನಾಗೇಗೌಡ ಎಂಬ ರೈತ ಕೊಟ್ಟಿಗೆಯಲ್ಲಿ 18 ಮೇಕೆ ಗಳನ್ನು ಕಟ್ಟಿದ್ದರು.ಮಂಡ್ಯ: ಎತ್ತಿನ ಗಾಡಿ ಓಟದಲ್ಲಿ ಗಾಡಿ ಹರಿದು ವ್ಯಕ್ತಿ ಬಲಿ: ಮತ್ತೊಬ್ಬನಿಗೆ ಗಾಯ

ಮಧ್ಯರಾತ್ರಿ ಚಿರತೆಗಳು ಕೊಟ್ಟಿಗೆ ಬಂದಿದ್ದವು, ಅಲ್ಲಿದ್ದ 18 ಮೇಕೆಗಳ ಪೈಕಿ 6 ಮೇಕೆಗಳಿಗೆ ಕಚ್ಚಿ ಅವುಗಳ ರಕ್ತ ಕುಡಿದು ಅರ್ಧ ಮಾಂಸವನ್ನು ತಿಂದಿವೆ. ಅಲ್ಲದೇ ಇನ್ನೂ 4 ಮೇಕೆಗಳನ್ನು ಚಿರತೆ ಗಳು ಹೊತ್ತೊಯ್ದಿವೆ.

ಬೆಳಗ್ಗೆ ನಾಗೇಗೌಡ ಎಂದಿನಂತೆ ಕೊಟ್ಟಿಗೆ ಬಳಿ ನೋಡಿದಾಗ ಚಿರತೆ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ.

ಎರಡರಿಂದ ಮೂರು ಚಿರತೆಗಳು ದಾಳಿ ನಡೆಸಿರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳಕ್ಕೆ ಶಾಸಕ ಪುಟ್ಟರಾಜು ಭೇಟಿ ನೀಡಿ, ಆರ್ಥಿಕ ಸಹಾಯ ಮಾಡಿ ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಸ್ಥಳೀಯರು, ಕೂಡಲೇ ಇಲ್ಲಿ ಚಿರತೆ ಸೆರೆಗಾಗಿ ಬೋನ್ ಇರಿಸಬೇಕು, ನಮಗೆ ಜಮೀನಿಗೆ ಹೋಗಲು ಸಹ ಭಯವಾಗುತ್ತಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.

Share This Article
Leave a comment