ಡಬಲ್ ಇಂಜಿನ್ ಸರ್ಕಾರದಿಂದ ‘ಅಭಿವೃದ್ಧಿಗೆ ದೋಖಾ ಇಲ್ಲ’ – ಯೋಗಿ

Team Newsnap
1 Min Read
  • ಮಂಡ್ಯದಲ್ಲಿ ಯುಪಿ ಸಿಎಂ ಯೋಗಿ ಹವಾ
  • ಬಿಜೆಪಿಗೆ ಬಲ ತುಂಬಿದ ಯೋಗಿ

ಮಂಡ್ಯ : ದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಯಾವತ್ತೂ ಕೆಲಸ, ಅಭಿವೃದ್ಧಿ ವಿಚಾರದಲ್ಲಿ ದೋಖಾ ಮಾಡಿಲ್ಲ, ಸಾಕಷ್ಟು ಕೆಲಸಗಳು ಅಗಿವೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸವಾಗುತ್ತದೆ. ಹಿಂದಿನ ಯುಪಿಎ ಸರ್ಕಾರ ಆರಂಭಿಸಿ ಅರ್ಧದಲ್ಲಿ ನಿಲ್ಲಿಸಿದ್ದ ಕಾಮಗಾರಿಗಳು, ಶಿಲಾನ್ಯಾಸ ಮಾಡಿ ನಿಂತು ಹೋಗಿದ್ದ ಯೋಜನೆಗಳನ್ನು ಮೋದಿ ಸರ್ಕಾರ ಪೂರ್ಣಗೊಳಿಸಿ ಉದ್ಘಾಟನೆ ಮಾಡಿದ್ದಾರೆ, ಚಾಲನೆ ನೀಡಿದ್ದಾರೆ. ಮೋದಿ ಸರ್ಕಾರದಲ್ಲಿ ಅಭಿವೃದ್ಧಿಯ ಬದಲಾವಣೆ ಕಾಣುತ್ತಿದೆ. ಬಿಜೆಪಿ ಬೆಂಬಲಿಸಿ, ಬಿಜೆಪಿಗೆ ಜನರು ಮತ ಹಾಕುವಂತೆ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯ ನಾಥ ಮಂಡ್ಯದಲ್ಲಿ ಬಧವಾರ ಮತದಾರರಲ್ಲಿ ಮನವಿ ಮಾಡಿದರು.

ಮಂಡ್ಯದ ಸಿಲ್ವರ್ ಜ್ಯೂಬಲಿ ಪಾರ್ಕ್ ನಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಸಿ ಎಂ ಯೋಗಿ ತ್ರೇತಾಯುಗದಿಂದಲೂ ಕರ್ನಾಟಕ ಮತ್ತು ಉತ್ತರ ಪ್ರದೇಶ ನಡುವೆ ಸಂಬಂಧವಿದೆ. ಮರ್ಯಾದಾ ಪುರುಷೋತ್ತರ ಶ್ರೀರಾಮ ಹುಟ್ಟಿದ ಸ್ಥಳ ಉತ್ತರ ಪ್ರದೇಶದ ಅಯೋಧ್ಯೆವಾದರೆ ಶ್ರೀರಾಮನ ಪರಮ ಭಕ್ತ ಹನುಮಂತ ಹುಟ್ಟಿದ ನಾಡು ಈ ಕರ್ನಾಟಕ. ಹೀಗಾಗಿ ಕರ್ನಾಟಕ ಮತ್ತು ಉತ್ತರ ಪ್ರದೇಶ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು.

ಇಂದು ಪ್ರಧಾನಿ ಮೋದಿಯವರ ಆಡಳಿತದ ಯೋಜನೆ ಪರಿಕಲ್ಪನೆಯನ್ನು ಇಡೀ ದೇಶದ ಜನರು, ವಿದೇಶಿಯವರು ಸಹ ಒಪ್ಪಿಕೊಂಡಿದ್ದಾರೆ, ಕೊಂಡಾಡಿದ್ದಾರೆ. ಭಾರತದ ಸಾಮರ್ಥ್ಯ ಇಡೀ ವಿಶ್ವಕ್ಕೆ ಗೊತ್ತಾಗಿದೆ. ಹೀಗಿರುವಾಗ ಕರ್ನಾಟಕವು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣಲು ಬಿಜೆಪಿಗೆ ಮತ ನೀಡುವಂತೆ ಮಂಡ್ಯ ಮತದಾರರನ್ನು ಕೋರಿದರು.

Share This Article
Leave a comment