ಭಾರತದಲ್ಲಿ ಸ್ವಚ್ಛ ಗಾಳಿ. ಶುದ್ದ ಕುಡಿಯುವ ನೀರಿಲ್ಲ- ಚುನಾವಣೆ ಪ್ರಚಾರದಲ್ಲಿ ಟ್ರಂಪ್ ಟೀಕೆ

Team Newsnap
1 Min Read

ಭಾರತ ಮತ್ತು ರಷ್ಯಾದಲ್ಲಿ ಸ್ವಚ್ಛ ಗಾಳಿ, ಶುದ್ಧ ಕುಡಿಯುವ ನೀರಿಲ್ಲ ಎಂದು ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಮೆರಿಕದಲ್ಲಿ ನ. 3ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅಮೆರಿಕದ ಹವಾಮಾನ ಬದಲಾವಣೆಯ ಬಗ್ಗೆ ಮಾತನಾಡುವಾಗ ಬೇರೆ ದೇಶಗಳ ಜೊತೆ ಹೋಲಿಕೆನ ಮಾಡಿರುವ ಡೊನಾಲ್ಡ್​ ಟ್ರಂಪ್, ಚೀನಾ, ರಷ್ಯಾ, ಭಾರತ ದೇಶಗಳನ್ನೇ ಗಮನಿಸಿ. ಆ ದೇಶಗಳ ಗಾಳಿ ಬಹಳ ಕಲುಷಿತವಾಗಿದೆ. ಭಾರತ, ರಷ್ಯಾಗಳ ವಾಯು ಮಾಲಿನ್ಯಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಅತಿ ಶುದ್ಧವಾದ ಗಾಳಿಯಿದೆ, ಸ್ವಚ್ಛವಾದ ನೀರಿದೆ ಎಂದು ಹೇಳಿದ್ದಾರೆ.

ಡೊನಾಲ್ಡ್​ ಟ್ರಂಪ್ ಮತ್ತು ಜೋ ಬಿಡೆನ್ ಇಬ್ಬರೂ ಇಂದು ತಮ್ಮ ಕೊನೆಯ ಮುಖಾಮುಖಿ ಸಂವಾದದಲ್ಲಿ ಭಾಗಿಯಾಗಲಿದ್ದಾರೆ.

ಕಪ್ಪು ಜನಾಂಗದವರಿಗೆ ಅಮೆರಿಕದಲ್ಲಿ ಲಿಂಕನ್ ಹೊರತುಪಡಿಸಿ ಬೇರೆ ಯಾವ ಅಧ್ಯಕ್ಷರೂ ಮಾಡದಷ್ಟು ಕೆಲಸವನ್ನು ನಾನು ಮಾಡಿದ್ದೇನೆ. ಅವರಿಗಾಗಿ ಹಲವಾರು ಯೋಜನೆಗಳನ್ನು ಘೋಷಿಸಿದ್ದೇನೆ ಎಂದು ಡೊನಾಲ್ಡ್​ ಟ್ರಂಪ್ ಹೇಳಿದ್ದರು.

ಅದಕ್ಕೆ ಪ್ರತಿಕ್ರಿಯೆ ನೀಡಿರುವ ಜೋ ಬಿಡೆನ್ ಅಮೆರಿಕದ ಇದುವರೆಗಿನ ಎಲ್ಲ ಅಧ್ಯಕ್ಷರಿಗಿಂತಲೂ ಅಬ್ರಾಹಾಂ ಲಿಂಕನ್ ಅತಿ ಹೆಚ್ಚು ವರ್ಣಭೇದವಿದ್ದ ಅಧ್ಯಕ್ಷರಾಗಿದ್ದರು. ಅವರನ್ನು ಟ್ರಂಪ್ ವಿನಾಕಾರಣ ಹೊಗಳುತ್ತಿದ್ದಾರೆ ಎಂದಿದ್ದಾರೆ.

ಇಂದು ನಡೆಯುವ ಮುಖಾಮುಖಿ ಸಂದರ್ಶನದಲ್ಲಿ ಡೊನಾಲ್ಡ್​ ಟ್ರಂಪ್ ಮತ್ತು ಜೋ ಬಿಡೆನ್ ಯಾವ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ.

ಮೊದಲ ಮುಖಾಮುಖಿ ಚರ್ಚೆ ವೇಳೆ ಟ್ರಂಪ್ ಅವರು ಜೋ ಬಿಡೆನ್​ಗೆ ಪ್ರತಿಕ್ರಿಯೆ ನೀಡಲು ಕೂಡ ಟ್ರಂಪ್ ಅವಕಾಶ ನೀಡಿರಲಿಲ್ಲ. ಆ ಚರ್ಚೆಯಲ್ಲಿ ಟ್ರಂಪ್ ಒಬ್ಬರೇ ವಿಜೃಂಭಿಸಿದ್ದರು. ಇಂದಿನ ಚರ್ಚೆಯಲ್ಲಿ ಬಿಡೆನ್ ಯಾವ ರೀತಿ ಟ್ರಂಪ್ ವಿರುದ್ಧ ಟೀಕಾಪ್ರಹಾರ ನಡೆಸಲಿದ್ದಾರೆ ಎಂಬುದನ್ನು ನೊಡಬೇಕಿದೆ.

TAGGED: , ,
Share This Article
Leave a comment