February 21, 2026

Newsnap Kannada

The World at your finger tips!

ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ : ರಿಟರ್ನ್ಸ್‌ ಲೋಪ ಸರಿಪಡಿಸಲು 2 ವರ್ಷ ಅವಕಾಶ

Spread the love

2022-23?ಸಾಲಿನ ಬಜೆಟ್‌ನ ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.

ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಬಜೆಟ್ ನಲ್ಲಿಆದಾಯ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಬಗ್ಗೆ ಹೆಚ್ಚು ನಿರೀಕ್ಷೆ ಹೊಂದಲಾಗಿತ್ತು. ಆದರೆ ಬಜೆಟ್‌ನಲ್ಲಿ ಅದ್ಯಾವುದೇ ಬದಲಾವಣೆ ಆಗಿಲ್ಲ. ಆದಾಗ್ಯೂ ತೆರಿಗೆದಾರರು ಈಗ ಎರಡು ವರ್ಷಗಳಲ್ಲಿ ಐಟಿ ರಿಟರ್ನ್ಸ್‌ ಅನ್ನು ನವೀಕರಿಸಬಹುದಾಗಿದೆ ಎಂದು ಘೋಷಿಸಿದ್ದಾರೆ.

ಐಟಿ ರಿಟರ್ನ್ಸ್‌ ಸಲ್ಲಿಕೆ ವೇಳೆ ಆಗಿರುವ ಲೋಪ ಸರಿಪಡಿಸಿ, ನವೀಕೃತ ರಿಟರ್ನ್ಸ್‌ ಸಲ್ಲಿಸಲು ಮೌಲ್ಯಮಾಪನ ವರ್ಷದಿಂದ 2 ವರ್ಷಗಳವರೆಗೆ ಕಾಲಾವಕಾಶ ನೀಡಲಾಗಿದೆ.

ವರ್ಜುವಲ್‌ ಡಿಜಿಟಲ್‌ ಸ್ವತ್ತುಗಳ ವರ್ಗಾವಣೆಯಿಂದ ಬರುವ ಯಾವುದೇ ಆದಾಯಕ್ಕೆ ಶೇ.30 ತೆರಿಗೆ ವಿಧಿಸಲಾಗುತ್ತದೆ. ವರ್ಚುವಲ್‌ ಸ್ವತ್ತುಗಳ ಉಡುಗೊರೆಗಳನ್ನು ಸ್ವೀಕರಿಸುವವರಿಗೆ ತೆರಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.

ಆದಾಯ ತೆರಿಗೆ ದರಗಳು :

2.5 ಲಕ್ಷ ರೂ.ವರೆಗೆ – ಶೂನ್ಯ
2.5-5 ಲಕ್ಷ – ಶೇ.5
5-7.50 ಲಕ್ಷ – ಶೇ.10 (ಒಟ್ಟು ಆದಾಯ 5 ಲಕ್ಷ ಮೇಲ್ಪಟ್ಟು ಇದ್ದರೆ 12,500 ರೂ. ಹೆಚ್ಚುವರಿ ತೆರಿಗೆ)
7.50-10 ಲಕ್ಷ – ಶೇ.15 (ಒಟ್ಟು ಆದಾಯ 7.5 ಲಕ್ಷ ಮೇಲ್ಪಟ್ಟು ಇದ್ದರೆ 37,500 ರೂ. ಹೆಚ್ಚುವರಿ ತೆರಿಗೆ)
10-12.50 ಲಕ್ಷ – ಶೇ.20 (ಒಟ್ಟು ಆದಾಯ 10 ಲಕ್ಷ ಮೇಲ್ಪಟ್ಟು ಇದ್ದರೆ 75,000 ರೂ. ಹೆಚ್ಚುವರಿ ತೆರಿಗೆ)
12.50-15 ಲಕ್ಷ – ಶೇ.25 (ಒಟ್ಟು ಆದಾಯ 12.5 ಲಕ್ಷ ಮೇಲ್ಪಟ್ಟು ಇದ್ದರೆ 1,25,000 ರೂ. ಹೆಚ್ಚುವರಿ ತೆರಿಗೆ)
15 ಲಕ್ಷ ಮೇಲ್ಪಟ್ಟು – ಶೇ.30 (ಒಟ್ಟು ಆದಾಯ 15 ಲಕ್ಷ ಮೇಲ್ಪಟ್ಟು ಇದ್ದರೆ 1,87,500 ರೂ. ಹೆಚ್ಚುವರಿ ತೆರಿಗೆ)

error: Content is protected !!