ಚೀನಾದ ಶಾಂಘೈನಲ್ಲಿ ಕರೋನಾದಿಂದಾಗಿ ಕಳೆದ ತಿಂಗಳು ಒಂದೇ ಒಂದು ಕಾರು ಕೂಡ ಮಾರಾಟವಾಗಿಲ್ಲ

Team Newsnap
1 Min Read
COVID

ಶಾಂಘೈ ನಗರದಲ್ಲಿ‌ ಕಳೆದ ತಿಂಗಳು ಒಂದೇ ಒಂದು ಕಾರು ಮಾರಾಟವಾಗಿಲ್ಲ. ನಗರದಲ್ಲಿ ಎರಡೂವರೆ (2.5) ಕೋಟಿ ನಿವಾಸಿಗಳಿದ್ದು, ಬಹುಪಾಲು ಜನರು ಹೆಚ್ಚಾಗಿ ಮನೆಯಿಂದ ಹೊರಗೆ ‌ಕಾಲಿಟ್ಟಿಲ್ಲ.

ಇದನ್ನು ಓದಿ :ಖಿನ್ನತೆಗೆ ಒಳಗಾದ ನಟಿಯೊಬ್ಬಳುಲೈವ್ ವಿಡಿಯೋ ಕಾಲ್ ಮಾಡಿ ಆತ್ಮಹತ್ಯೆಗೆ ಶರಣು

ಕೋವಿಡ್‌ ಪುನಃ ಹೆಚ್ಚಾದ ಕಾರಣ ಶಾಂಘೈನ ಲಾಕ್‌ಡೌನ್ ಬಿಗಿಗೊಳಿಸಲಾಗಿದೆ. ಪರಿಸ್ಥಿತಿ ಎಷ್ಟು ಬಿಗಿಯಾಗಿದೆ ಎಂಬುದಕ್ಕೆ ಪುರಾವೆಗಾಗಿ, ಈ ಒಂದು ಉದಾಹರಣೆ ಪರಿಗಣಿಸಿಸಬಹುದು.

ಶಾಂಘೈ ನಗರದ ಬಹುತೇಕ ಎಲ್ಲಾ ಡೀಲರ್‌ಶಿಪ್‌ಗಳನ್ನು ಮುಚ್ಚಲಾಗಿದೆ. ಆಟೋಮೊಬೈಲ್ ಸೇಲ್ಸ್ ಅಸೋಸಿಯೇಷನ್ ​​ಸೋಮವಾರ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದೆಯಲ್ಲದೇ 0 ಮಾರಾಟದ ಅಂಕಿಅಂಶವನ್ನೂ ಬಹಿರಂಗಮಾಡಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ 26,311 ವಾಹನ ಮಾರಾಟವಾಗಿತ್ತು.

Share This Article
Leave a comment