ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತುಂಬಾ ಬೇಸರಗೊಂಡಿದ್ದಾರೆ. ಬೆಂಗಳೂರಿನಲ್ಲಿನ ನಿವಾಸದ ಬೇಡಿಕೆ ಇನ್ನೂ ಮರಿಚಿಕೆಯಾಗಿದೆ.
ನಾನು ಮನೆ ಕೊಡುವಂತೆ ಭಿಕ್ಷೆ ಬೇಡುತ್ತಿಲ್ಲ. ಕೊಟ್ಟರೆ ಕೊಡಲಿ, ಬಿಟ್ರೆ ಬಿಡ್ಲಿ. ಇನ್ನು ಮುಂದೆ ನಿವಾಸದ ಬೇಡಿಕೆ ಇಡುವುದಿಲ್ಲ. ನಾನು ಸರ್ಕಾರಕ್ಕೆ ಕೊನೆಯ ಪತ್ರ ಬರೆಯುತ್ತೇನೆ, ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇಂದು ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ ತಮ್ಮ ದುಗುಡ ಪ್ರಕಟಿಸಿದರು.
ಮನೆ ನೀಡುವ ವಿಷಯದಲ್ಲಿ ಸರ್ಕಾರ ಯಾಕೆ ವಿಳಂಬ ಮಾಡುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ನೇರ ಸ್ವಭಾವ ದವರಾದ ಬಸವರಾಜ ಹೊರಟ್ಟಿಯವರ ಸೈದ್ಧಾಂತಿಕ ರಾಜಕೀಯ ಹೋರಾಟ ಹುಬ್ಬಳ್ಳಿ ಯವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿಳಿಯದೇನಲ್ಲ. ಆದರೂ ನನಗೆ ಮನೆ ಅಲಾಟ್ ಆಗಿಲ್ಲ.
1ರಿಂದ ಆರನೇ ತರಗತಿ ಶಾಲೆಗಳನ್ನೂ ಆರಂಭ ಮಾಡಬೇಕು. ಶಾಲೆ ಆರಂಭದ ಬಗ್ಗೆ ತಾವು ಈಗಾಗಲೇ ಸಲಹೆ ನೀಡಿದ್ದಾಗಿ ಹೊರಟ್ಟಿ ತಿಳಿಸಿದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು