ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕಾಗಿ ಸೋನಾಕ್ಷಿಯನ್ನು ಮೊರಾದಾಬಾದ್‍ಗೆ ಬರುವಂತೆ ಕೇಳಲಾಗಿತ್ತು. ಅದಕ್ಕಾಗಿ 37 ಲಕ್ಷ ರೂ. ಹಣವನ್ನು ನೀಡಲಾಗಿತ್ತು. ಆದರೆ ಸೋನಾಕ್ಷಿ ಗೈರಾಗಿದ್ದರು ಇದೀಗ ನ್ಯಾಯಾಲಯ ಅವರ ವಿರುದ್ಧ ವಾರೆಂಟ್ ಜಾರಿ ಮಾಡಿದೆ.
ಕಾರ್ಯಕ್ರಮ ಆಯೋಜಕ ಪ್ರಮೋದ್ ಶರ್ಮಾ, ಮೊರಾದಾಬಾದ್‍ನ ಕಟ್ಘರ್ ಪೋಲಿಸ್ ಠಾಣೆ ಪ್ರದೇಶದ ನಿವಾಸಿಯಾಗಿದ್ದಾರೆ.
ಕಾರ್ಯಕ್ರಮವೊಂದಕ್ಕೆ ಸೋನಾಕ್ಷಿಯನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು. ಈವೆಂಟ್‍ನಲ್ಲಿ ಸೋನಾಕ್ಷಿ ಭಾಗವಹಿಸಲಿಲ್ಲ.
ಆಗ ಈವೆಂಟ್ ಆಯೋಜಕರು ಹಣವನ್ನು ಮರುಪಾವತಿ ಮಾಡುವಂತೆ ಹೇಳಿದ್ದಾರೆ. ಈವೆಂಟ್ ಆಯೋಜಕರಿಗೆ ಹಣ ನೀಡಲು ಸೋನಾಕ್ಷಿ ಮ್ಯಾನೇಜರ್ ನಿರಾಕರಿಸಿದ್ದರು ಎನ್ನಲಾಗಿದೆ.
ಸೋನಾಕ್ಷಿ ಸಿನ್ಹಾ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಹಣ ಸಿಗದಿದ್ದಾಗ ವಂಚನೆ ಪ್ರಕರಣ ದಾಖಲಾಗಿತ್ತು.
ಗೈರು ಹಾಜರಾಗಿದ್ದರಿಂದ ವಂಚನೆ ಪ್ರಕರಣದಲ್ಲಿ ನ್ಯಾಯಾಲಯ ಇದೀಗ ಅವರ ವಿರುದ್ಧ ವಾರೆಂಟ್ ಜಾರಿ ಮಾಡಿದೆ.
- ಕೇಂದ್ರ ಮಂತ್ರಿ ಅಮಿತ್ ಶಾ ಭೇಟಿ ಸಾಧ್ಯವಾಗಲಿಲ್ಲ : ಸಂಪುಟ ರಚನೆ ಬಗ್ಗೆ ಮಾತುಕತೆ ಇಲ್ಲ : ಸಿಎಂ
- ಸಮುದ್ರದಲ್ಲಿ ಚೇಜ್ ಮಾಡಿ1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ
- ಕಾಂಗ್ರೆಸ್ನಲ್ಲೂ ಪರಷತ್ ಟಿಕಟ್ ಗೆ ಜೋರಾಯ್ತು ಗಲಾಟೆ – ಡಿಕೆಶಿ , ಸಿದ್ದು ದೆಹಲಿಗೆ
- ಧಾರವಾಡ ಬಳಿ ಭೀಕರ ರಸ್ತೆ ಅಪಘಾತ : ಮರಕ್ಕೆ ಕ್ರೂಸರ್ ಡಿಕ್ಕಿ 8 ಮಂದಿ ಸ್ಥಳದಲ್ಲೇ ಸಾವು
- ಅಂತಾರಾಷ್ಟ್ರೀಯ ಯೋಗ ದಿನದಂದು ಮೋದಿ ಮೈಸೂರಿಗೆ
More Stories
ಅವಕಾಶ ಸಿಕ್ಕಾಗ ಖಂಡಿತಾ ಮಂಡ್ಯಕ್ಕೆ ಹೋಗುವೆ – ಸನ್ನಿಲಿಯೋನ್
ಚಿನ್ನ ಅಡ ಇಟ್ಟು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ನಟಿ ಚೇತನಾ – ವೈದ್ಯರು ಸಿಬ್ಬಂದಿ ನಾಪತ್ತೆ
1988ರ ರಸ್ತೆ ಗಲಭೆ ಪ್ರಕರಣ: ನವಜೋತ್ ಸಿಧುಗೆ 1 ವರ್ಷ ಜೈಲು ಶಿಕ್ಷೆ ಸುಪ್ರೀಂ