ಬಿಜೆಪಿ ಜೊತೆ ಮೈತ್ರಿ ಇಲ್ಲ – ಜೆಡಿಎಸ್ ನಿಧಾ೯ರ: ಸ್ಥಳೀಯ ನಾಯಕರ ತೀಮಾ೯ನವೇ ಕೊನೆ HDK

Team Newsnap
2 Min Read

ಪರಿಷತ್ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಯಾವುದೇ ರೀತಿಯ ಮೈತ್ರಿ ಆಗಲಿ, ಒಳ ಒಪ್ಪಂದ ಆಗಲಿ ಇಲ್ಲ.  ಆದರೆ ಯಾರಿಗೆ ಮತ ಹಾಕಬೇಕು ಎನ್ನುವ ನಿಧಾ೯ರ ವನ್ನು ಸ್ಥಳೀಯ ನಾಯಕರಿಗೆ ಬಿಟ್ಟಿದ್ದು ಎಂದು ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಪ್ರಕಟಿಸಿದರು

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ನಡೆಸಿ ಮಾತನಾಡಿದ ಕುಮಾರಸ್ವಾಮಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಆಗಲಿದೆ ಎಂಬ ಕಪೋಲಕಲ್ಪಿತ ಸುದ್ದಿಗಳು ಬರುತ್ತಿವೆ. ಕಾಂಗ್ರೆಸ್ ನಾಯಕರು ಬಿಜೆಪಿಯ ಬಿಟೀಂ ಅಂತಾ ರಾಜಕೀಯದ ಮಂತ್ರ ಪಠಿಸುತ್ತಿದ್ದಾರೆ. ಕಳೆದ ಚುನಾವಣೆಯಿಂದ ನಿರಂತರವಾಗಿ ಮಾತನ್ನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಒಳ ಒಪ್ಪಂದ, ಹೊರ ಒಪ್ಪಂದ ಯಾವುದೂ ಇಲ್ಲ. ಸ್ಥಳೀಯ ನಾಯಕರ ತೀರ್ಮಾನಕ್ಕೆ ಬಿಡಲಾಗಿದೆ. ಯಡಿಯೂರಪ್ಪ ನಮ್ಮ ಪಕ್ಷದ ಬೆಂಬಲ ಕೋರಿದ್ದಾರೆ. ನಮ್ಮ ಮತಗಳನ್ನ ಪಡೆಯಲು ಯಡಿಯೂರಪ್ಪರಲ್ಲಿ ಪ್ರಾಮಾಣಿಕತೆ ಇತ್ತು. ಜಿಲ್ಲಾ ಮುಖಂಡರ ಜೊತೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೆಲವು ಕಡೆ ಕಾಂಗ್ರೆಸ್ ವಿರುದ್ಧ ಹೋರಾಟ. ಮತ್ತೆ ಕೆಲವು ಕಡೆ ಬಿಜೆಪಿ ವಿರುದ್ಧ ಹೋರಾಟ ಇದೆ. ನಮ್ಮ ನಮ್ಮ ಪಕ್ಷದ ತಂತ್ರಗಾರಿಕೆ ಎಂದರು.

ಜೆಡಿಎಸ್ ಜಾತ್ಯಾತೀತ ಅಲ್ಲಾ, ಕುಟುಂಬ ಪಕ್ಷ ಅಂತಾ ಹೊಸದಾಗಿ ಸೇರಿಸಿ ಮಾತನ್ನಾಡುತ್ತಿದ್ದಾರೆ. ಜೆಡಿಎಸ್ ಕೇವಲ ಆರು ಸ್ಥಾನಗಳಿಗೆ ಸ್ಪರ್ಧಿಸಿರುವುದು. ಬಿಜೆಪಿಗೆ ಅನುಕೂಲ ಮಾಡಿಕೊಡಲು ಎಂಬ ಚರ್ಚೆ ಆಗುತ್ತಿದೆ. ಕಾಂಗ್ರೆಸ್ ನಾಯಕರು ಜೆಡಿಎಸ್ ಅವಶ್ಯಕತೆ ಇಲ್ಲಾ ಅಂದಿದ್ದಾರೆ. ಮುಂದಿನ ದಿನಗಳಲ್ಲಿ ಧೂಳೀಪಟವಾಗಲಿದೆ ಅಂತಾ ಲಘುವಾಗಿ ಹೇಳುತ್ತಿದ್ದಾರೆ. ಜೆಡಿಎಸ್​ಗೆ ನೆಲೆಯೇ ಇಲ್ಲ ಅಂತಾನೂ ಹೇಳುತ್ತಿದ್ದಾರೆ ಎಂದು ಕಿಡಿಕಾರಿದು.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಲ್ಲ. ನಮ್ಮ ಆರು ಕ್ಷೇತ್ರಗಳಲ್ಲಿ ಮೂರು ಪಕ್ಷಗಳ ನಡುವೆ ಸ್ಪರ್ಧೆ ಇದೆ. ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಸಣ್ಣ ಪಕ್ಷವಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಕಲಬುರಗಿ, ಯಾದಗಿರಿ ಸೇರಿದಂತೆ ಹಲವೆಡೆ ನಮ್ಮ ಪಕ್ಷವೇ ನಿರ್ಣಾಯಕವಾಗಿದೆ. ಕೊಪ್ಪಳದಲ್ಲಿ ಸ್ವಲ್ಪ ನಮ್ಮ ಪಕ್ಷದ ಶಕ್ತಿ ಕಡಿಮೆ ಇದೆ.

ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ 400ಕ್ಕೂ ಹೆಚ್ಚು ಮತಗಳಿವೆ. ಬೆಂಗಳೂರು ನಗರದಲ್ಲೂ 150 ಮತಗಳಿವೆ. 19 ಕಡೆ ಬಿಜೆಪಿ ಜೊತೆ ನೇರ ಹೊಂದಾಣಿಕೆ ಎಂಬ ತಪ್ಪು ಕಲ್ಪನೆ ಇದೆ. ಸ್ಥಳೀಯ ಮಟ್ಟದ ಪಕ್ಷದ ಮುಖಂಡರ ಜೊತೆ ಸಮಾಲೋಚನೆ ನಡೆಸಿದ್ದೇನೆ. ಎರಡ್ಮೂರು ಸುತ್ತು ಚರ್ಚೆ ನಡೆಸಿದ್ದೇನೆ. ನಮ್ಮ ಗುರಿ 2023ರ ಸಾರ್ವತ್ರಿಕ ಚುನಾವಣೆ ಮೇಲೆ. ಮಿಷನ್ 123 ಮಾತ್ರ ನಮ್ಮ ಗುರಿ. ಮುಂದಿನ ಚುನಾವಣೆಗೆ ಅನುಕೂಲವಾಗುವಂತೆ ಸ್ಥಳೀಯರ ತೀರ್ಮಾನಕ್ಕೆ ಬಿಡಲಾಗಿದೆ. ಯಾವುದೇ ಮೈತ್ರಿಯ ಪ್ರಶ್ನೆಯೇ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕುತ್ತಿವೆ ಎಂದು ಸ್ಪಷ್ಟಪಡಿಸಿದರು.

Share This Article
Leave a comment