ಕಾರುಗಳಿಗೆ ಆರು ಏರ್‌ಬ್ಯಾಗ್‌ ಕಡ್ಡಾಯ:ಶೀಘ್ರದಲ್ಲೇ ಅಧಿಸೂಚನೆ : ಸಚಿವ ನಿತಿನ್ ಗಡ್ಕರಿ

Team Newsnap
1 Min Read

ಎಲ್ಲಾ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ ಇರುವುದನ್ನು ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಪ್ರತಿ ಏರ್‌ಬ್ಯಾಗ್‌ ದರ ₹ 800 ಆಗಲಿದೆ. ಹೀಗಾಗಿ, ಆಟೊಮೊಬೈಲ್‌ ಉತ್ಪಾದಕರಿಗೆ ಇನ್ನು ಮುಂದೆ ಕಾರುಗಳಲ್ಲಿ ಕಡ್ಡಾಯವಾಗಿ ಆರು ಏರ್‌ಬ್ಯಾಗ್‌ ಅಳವಡಿಸಿ ಸುರಕ್ಷತಾ ಕ್ರಮ ಅನುಸರಿಸುವಂತೆ ಸೂಚಿಸಲಿದೆ ಎಂದು ಹೇಳಿದ್ದಾರೆ.

WhatsApp Image 2022 08 05 at 7.57.58 PM

ಎಲ್ಲಾ ಕಾರುಗಳಲ್ಲಿ ಮುಂಭಾಗದ ಎರಡು ಸೀಟುಗಳಿಗೆ ಅನ್ವಯಿಸಿ ಏರ್‌ಬ್ಯಾಗ್‌ ಇರುವುದು ಕಡ್ಡಾಯ. ಆರು ಏರ್‌ಬ್ಯಾಗ್‌ ಕಡ್ಡಾಯಗೊಳಿಸಿ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಜ್ಯಸಭೆಗೆ ತಿಳಿಸಿದರು.ಇದನ್ನು ಓದಿ –ಸ್ವಾತಂತ್ರ‍್ಯ ಹೋರಾಟಗಾರರ ಮನೆಗಳಿಗೇ ತೆರಳಿ ಗೌರವ ಅರ್ಪಿಸಲಿದ್ದಾರೆ ರಾಜ್ಯಪಾಲರು

ಜೊತೆಗೆ ಸುರಕ್ಷತಾ ಮಾರ್ಗದಂಡಗಳಿಗೆ ಅನುಸಾರವಾಗಿ ವಿವಿಧ ಮಾದರಿಯ ಕಾರುಗಳಿಗೆ ಶ್ರೇಣಿಯನ್ನು ನೀಡಲು ತೀರ್ಮಾನಿಸಲಾಗಿದೆ, ಭಾರತದಲ್ಲಿ ಪ್ರತಿವರ್ಷ ಅಪಘಾತಗಳಿಂದ ಲಕ್ಷಕ್ಕೂ ಅಧಿಕ ಜನರು ಸಾಯುತ್ತಿದ್ದಾರೆ. ಇದನ್ನು ತಗ್ಗಿಸುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.

Share This Article
Leave a comment