November 15, 2024

Newsnap Kannada

The World at your finger tips!

budget , union , release

No need to pay income tax up to Rs 7.27 lakh: Union Finance Minister Nirmala 7.27 ಲಕ್ಷ ರು ತನಕ ಆದಾಯ ತೆರಿಗೆ ಪಾವತಿ ಅಗತ್ಯವಿಲ್ಲ

ನಾಳೆ ಕೇಂದ್ರ ಬಜೆಟ್​ ಮಂಡನೆಗೆ ನಿರ್ಮಲಾ ಸೀತಾರಾಮನ್ ಸಿದ್ದತೆ

Spread the love

2023-24ನೇ ಸಾಲಿನ ಕೇಂದ್ರ ಬಜೆಟ್‌ ನಾಳೆ (ಫೆ. 1)ಮಂಡನೆಯಾಗಲಿದೆ ಪ್ರಧಾನಿ ಮೋದಿ ನೇತೃತ್ವದ 2ನೇ ಅವಧಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ ಇದು. ಬೆಟ್ಟದಷ್ಟು ನಿರೀಕ್ಷೆ ಇದೆ. ಅದರಲ್ಲೂ ಮಧ್ಯಮ ವರ್ಗದ ಜನ ಈ ಬಜೆಟ್‌ನತ್ತ ದೃಷ್ಟಿ ನೆಟ್ಟು ಕೂತಿದ್ದಾರೆ.

ಕೇಂದ್ರ ಬಜೆಟ್ ಮಂಡನೆಗೆ ಒಂದೇ ದಿನ ಬಾಕಿ ಉಳಿದಿದೆ. ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಲೋಕಸಭೆ, ರಾಜ್ಯಸಭೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಭಾಷಣ ಮಾಡಲಿದ್ದಾರೆ.

ಬಜೆಟ್ ಅಧಿವೇಶನದ ಮೊದಲ ದಿನ, ರಾಷ್ಟ್ರಪತಿ ದ್ರೌಪದಿ ಮುರ್ಮು ಮೊದಲ ಬಾರಿ ಸಂಸತ್​​ಉದ್ದೇಶಿಸಿ ಮಾತನಾಡಲಿದ್ದಾರೆ. ಇನ್ನು, ನಾಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ 5ನೇ ಬಾರಿ ಬಜೆಟ್ ಮಂಡಿಸಲಿದ್ದಾರೆ. ಮೋದಿ ಸರ್ಕಾರದ 2ನೇ ಅವಧಿಯ 5ನೇ ಮತ್ತು ಕೊನೆ ಪೂರ್ಣ ಬಜೆಟ್ ಆಗಿರಲಿದೆ. ಹೀಗಾಗಿ ಹಲವು ಜನಪರ ಯೋಜನೆಗಳು ಪ್ರಕಟಿಸುವ ಸಾಧ್ಯತೆ ಇದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಮುಂಗಡಪತ್ರ ಮಂಡಿಸಲಿದ್ದಾರೆ. 2023-24ರ ಬಜೆಟ್, ಮುಂಬರುವ ಲೋಕಸಭೆ ಎಲೆಕ್ಷನ್​​​​ಗೆ ಪೂರಕವಾಗಿ ಸಿದ್ಧಗೊಂಡಿರಲಿದೆ ಎಂದು ಅಂದಾಜಿಸಲಾಗುತ್ತಿದೆ ಅಲ್ಲದೆ, ದೇಶದ 9 ರಾಜ್ಯಗಳ ವಿಧಾನಸಭೆ ಚುನವಣೆಯ ​​ ಮೇಲೂ ಬಜೆಟ್​​ ಕೇಂದ್ರೀಕೃತವಾಗಿರಲಿದೆ.

ಇಂದಿನಿಂದ ಆರಂಭವಾಗುವ ಅಧಿವೇಶನ, ಫೆಬ್ರವರಿ 13ರ ವರೆಗೆ ಮುಂದುವರಿಯುವ ಸಾಧ್ಯತೆಯಿದೆ.ರಾಜ್ಯದಲ್ಲಿ 13 ಐಪಿಎಸ್ ಅಧಿಕಾರಿಗಳು ವರ್ಗಾವಣೆ

Copyright © All rights reserved Newsnap | Newsever by AF themes.
error: Content is protected !!