ನಿಖಿಲ್ ಕುಮಾರಸ್ವಾಮಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದರು
ಮದ್ದೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಅವರು, ನಿಖಿಲ್ 30-40 ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಾರೆ. ಆದರೆ ಅವರು ವಿಧಾನ ಸಭೆಗೆ ಸ್ಪರ್ಧಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಬೇಬಿ ಬೆಟ್ಟ ಟ್ರಯಲ್ ಬ್ಲಾಸ್ಟ್ ಬಗ್ಗೆ ಪ್ರತಿಕ್ರಿಯೆ ನೀಡಿ, ರೈತರ ಒತ್ತಾಯಕ್ಕೆ ಮಣಿದು ಟ್ರಯಲ್ ಮುಂದೂಡಿದ್ದಾರೆ. ಟ್ರಯಲ್ ಬ್ಲಾಸ್ಟ್ ಬೇಕೋ ಬೇಡವೋ ಸರ್ಕಾರ ತೀರ್ಮಾನಿಸಲಿದೆ ಎಂದರು. ಇದನ್ನು ಓದಿ –ಟ್ರಯಲ್ ಬ್ಲಾಸ್ಟ್ ಆಧರಿಸಿ ಗಣಿಗಾರಿಕೆಗೆ ಅವಕಾಶ ಬೇಡ: ಸಿಎಂಗೆ ಸುಮಲತಾ ಪತ್ರ
ಇ.ಡಿ ಯಿಂದ ಸೋನಿಯಾಗಾಂಧಿ ವಿಚಾರಣೆ ಕುರಿತು ಕಾಂಗ್ರೆಸ್ ನವರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಅವರ ವಿರೋಧಿಗಳನ್ನು ಕೆಲವು ಸಂಸ್ಥೆಗಳ ಮೂಲಕ ಅವರ ಕಾರ್ಯ ಚಟುವಟಿಕೆಗಳನ್ನ ಸ್ತಬ್ಧ ಮಾಡಬೇಕು ಎಂದ ವಾತಾವರಣ ಕಾಣುತ್ತಿದ್ದೇವೆ. ಆದರೆ ಇಂತಹ ವಿಚಾರದಲ್ಲಿ ರಸ್ತೆಗೆ ಇಳಿದು ಜನರಿಗೆ ತೊಂದರೆ ಕೊಡುವುದು ಅನವಶ್ಯಕ. ಬಿಜೆಪಿ ಸರ್ಕಾರ ಜನರಿಗೆ ಎರಡು ಹೊತ್ತು ಗೌರವಯುತವಾಗಿ ಬದುಕುವ ಶಕ್ತಿ ತುಂಬಲಿಲ್ಲ. ಆದರೆ ಅವರಿಗೆ ಹತ್ತಿರದವರಿಗೆ ದಿನಕ್ಕೆ 1,300 ಕೋಟಿ ಆದಾಯ ಸಂಪಾದಿಸುವ ಶಕ್ತಿ ತುಂಬಿದ್ದಾರೆ. ಈ ರೀತಿಯ ವಿಚಾರಗಳಿಗೆ ದಾಖಲೆ ಇಟ್ಟುಕೊಂಡು ಕಾಂಗ್ರೆಸ್ ಹೋರಾಟ ಮಾಡಬೇಕು. ಅದನ್ನು ಬಿಟ್ಟು ಪ್ರತಿನಿತ್ಯ ಹೋರಾಟ ಮಾಡುವುದರಿಂದ ಜನಸಾಮಾನ್ಯರಿಗೆ ಆಗುವ ಸಮಸ್ಯೆ ಬಗ್ಗೆ ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
More Stories
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ