ಬೆಂಗಳೂರು ಸೇರಿದಂತೆ 41 ಕಡೆ NIA ದಾಳಿ

Team Newsnap
1 Min Read

ನವದೆಹಲಿ : ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಐಸಿಸ್‌ ಉಗ್ರ ಸಂಘಟನೆಯ ಸಂಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ , ಮಹಾರಾಷ್ಟ್ರ‌ ಸೇರಿದಂತೆ ದೇಶದ 41 ಕಡೆ ದಾಳಿ ನಡೆಸಿದೆ .

ಇಂದು ಮುಂಜಾನೆ ಎನ್‌ ಐಎ ದೇಶದ 41 ಕಡೆಗಳಲ್ಲಿ ಐಸಿಸ್‌ ಉಗ್ರ ಸಂಘಟನೆಯ ಸಂಚಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದೆ.

ಐಸಿಸ್‌ (ISIS) ಉಗ್ರರ ಜೊತೆ ಸಂಪರ್ಕದಲ್ಲಿರುವ ಹಾಗೂ ವಾಸವಾಗಿರುವ ಶಂಕೆ ಹಿನ್ನೆಲೆ NIA ಬೆಂಗಳೂರಿನ ಪ್ರೇಜರ್ ಟೌನ್‌ನ ಮೋರ್ ರಸ್ತೆಯಲ್ಲಿ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದೆ. ನಾ ನಿನ್ನ ಮರೆಯಲಾರೆ !

ಅಧಿಕಾರಿಗಳು ಮಹಾರಾಷ್ಟ್ರದ ಪುಣೆ, ಥಾಣೆ ಗ್ರಾಮಾಂತರ, ಥಾಣೆ ನಗರ ಮತ್ತು ಮೀರಾ ಭಯಂದರ್‌ನಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದ್ದು , ಈ ವೇಳೆ ಇಸ್ಲಾಮಿಕ್ ಸ್ಟೇಟ್ ಜೊತೆ ನಂಟು ಹೊಂದಿದ್ದಾರೆ ಎಂದು ಶಂಕಿಸಲಾದ ಪುಣೆ ಮೂಲದ 15 ಮಂದಿಯನ್ನು ವಶ ಪಡೆದಿರುವುದಾಗಿ ತಿಳಿದುಬಂದಿದೆ .

Share This Article
Leave a comment