February 8, 2023

Newsnap Kannada

The World at your finger tips!

Raid , NIA , congress

NIA raid on Congress office in Tirthahalli: Ex-minister Kimmane Ratnakar questioned ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್‌ ಕಚೇರಿ ಮೇಲೆ NIA ದಾಳಿ‌: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ವಿಚಾರಣೆ

ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್‌ ಕಚೇರಿ ಮೇಲೆ NIA ದಾಳಿ‌: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ವಿಚಾರಣೆ

Spread the love

ಮಂಗಳೂರು ಕುಕ್ಕರ್‌ ಬ್ಲಾಸ್‌ ಕೇಸ್‌ಗೆ ಸಂಬಂಧಪಟ್ಟಂತೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಕಾಂಗ್ರೆಸ್‌ ಕಚೇರಿ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದು, ಅಲ್ಲದೆ, ಕಾಂಗ್ರೆಸ್ ಮಾಜಿ ಶಾಸಕ ಹಾಗೂ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಅವರನ್ನು ವಿಚಾರಣೆ ನಡೆಸಿದ್ದಾರೆ.

ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ ಪ್ರಕರಣದ ಆರೋಪಿ ಶಾರೀಖ್‌ ಕುಟುಂಬದ ಆಸ್ತಿಯನ್ನು ಕಾಂಗ್ರೆಸ್‌ ಪಕ್ಷ, ಕಚೇರಿಗಾಗಿ 10 ಲಕ್ಷ ರು ಲೀಸ್‌ಗೆ ಪಡೆದಿತ್ತು.ಫೆ.17 ರಂದು ರಾಜ್ಯ ಬಜೆಟ್ : ಜನಪ್ರಿಯ ಯೋಜನೆಗಳ ಘೋಷಣೆ ನಿರೀಕ್ಷೆ

ಈ ವರ್ಷ ಜೂನ್‌ ತಿಂಗಳಿಗೆ ಈ ಲೀಸ್‌ ಮುಕ್ತಾಯವಾಗುತ್ತದೆ. ಈ ಹಿನ್ನೆಲೆ ಕಾಂಗ್ರೆಸ್‌ ಕಚೇರಿ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿದ ಕಿಮ್ಮನೆ ರತ್ನಾಕರ್‌, ಕಾಂಗ್ರೆಸ್‌ ಕಚೇರಿಗೆ ಎನ್‌ಐಎ ಅಧಿಕಾರಿಗಳು ಭೇಟಿ ನೀಡಿದ್ದರು. ಅಲ್ಲದೆ, ದಾಖಲೆಗಳನ್ನು ಪಡೆಯಲು ಇಡಿ ಅಧಿಕಾರಿಗಳು ಸಹ ಆಗಮಿಸಿದ್ದರು ಎಂದೂ ಕಿಮ್ಮನೆ ರತ್ನಾಕರ್‌ ಹೇಳಿದ್ದಾರೆ. ಅಲ್ಲದೆ, ಶಾರೀಖ್‌ ಕುಟುಂಬಕ್ಕೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ ಎಂದೂ ಹೇಳಿಕೊಂಡಿದ್ದಾರೆ.

ಶಂಕಿತ ಉಗ್ರ ಶಾರೀಖ್ ಕುಟುಂಬದ ಆಸ್ತಿಗೆ ಸಂಬಂಧಿಸಿದಂತೆ NIA ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸೊಪ್ಪು ಗುಡ್ಡೆಯಲ್ಲಿರುವ ಶಾರೀಖ್ ಕುಟುಂಬಕ್ಕೆ ಸೇರಿದ ಕಾಂಪ್ಲೆಕ್ಸ್‌ನಲ್ಲಿ ತಪಾಸಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಕಾಂಪ್ಲೆಕ್ಸ್‌ನಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಗೆ 8 ವರ್ಷಗಳ ಕಾಲ ಬಾಡಿಗೆ ನೀಡಿದ್ದ ಶಾರೀಖ್‌ ತಂದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಹೋದರನ ಪುತ್ರ ನವೀನ್ ಹೆಸರಿನಲ್ಲಿ 10 ಲಕ್ಷ ರೂ. ನೀಡಿ ಕಾಂಗ್ರೆಸ್ ಕಚೇರಿಗೆ ಬಾಡಿಗೆ ಪಡೆಯಲಾಗಿತ್ತು ಎಂದು ತಿಳಿದುಬಂದಿದೆ.

ಪ್ರತಿ ತಿಂಗಳು 10, 000 ಬಾಡಿಗೆಯಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದದಂತೆ ಪ್ರತಿ ತಿಂಗಳು ಶಾರೀಖ್‌ ಕುಟುಂಬದ ಬ್ಯಾಂಕ್ ಖಾತೆಗೆ 10,000 ಜಮಾ ಮಾಡಲಾಗುತ್ತಿತ್ತು.

2023ರ ಜೂನ್ ತಿಂಗಳಿನಲ್ಲಿ ಈ ಒಪ್ಪಂದ ಅಂತ್ಯವಾಗಲಿದ್ದು 10 ಲಕ್ಷ ರೂ. ಅಡ್ವಾನ್ಸ್ ನೀಡಲು ಕೋರಲಾಗಿತ್ತು. ಅಡ್ವಾನ್ಸ್ ಹಣವನ್ನು ವಾಪಸ್ ನೀಡಿದರೆ ಕಚೇರಿ ಖಾಲಿ ಮಾಡುವುದಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದು, ಈ ಸಂಬಂಧ ಎನ್ಐಎ ಅಧಿಕಾರಿಗಳು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿಚಾರಣೆ ನಡೆಸಿ ತೆರಳಿದ್ದಾರೆ.

error: Content is protected !!