ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಪ್ರೇಮಿಗಳನ್ನು ಮಂಡ್ಯ ಪೊಲೀಸರು ದೂರ ಮಾಡಿದ ಪ್ರಸಂಗ ವಿರೋಧಿಸಿ ಈಗ ಪಶ್ಚಿಮ ಪೋಲಿಸ್ ವಿರುದ್ದವೇ ಜಿಲ್ಲಾ ಎಸ್ಪಿ ಗೆ ದೂರು ನೀಡಲಾಗಿದೆ.
ಮಂಡ್ಯ ನಗರದ ಕಲ್ಲಹಳ್ಳಿಯ ನಿವಾಸಿ ತೇಜಸ್ ಹಾಗೂ ಚೈತನ್ಯ ಎಂಬ ಯುವತಿ ಫೆಬ್ರವರಿ 15ರಂದು ಮದುವೆಯಾಗಿದ್ದರು.
ತುಮಕೂರು ಜಿಲ್ಲೆ ಕುಣಿಗಲ್ ಬಳಿಯ ವಾನಗೆರೆ ನಿವಾಸಿ ಚೈತನ್ಯ.
ಬೆಂಗಳೂರಿನಲ್ಲಿ ಓದುವ ವೇಳೆ ತೇಜಸ್ ಪರಿಚಯವಾಗಿತ್ತು.ಬೇರೆ, ಬೇರೆ ಜಾತಿ ಅನ್ನೋ ಕಾರಣಕ್ಕೆ ಒಪ್ಪದ ಯುವತಿ ಮನೆಯವರು.ಯುವತಿಗೆ ಬೇರೆ ಹುಡುಗನ ಜೊತೆಗೆ ನಿಶ್ಚಿತಾರ್ಥಕ್ಕೆ ನಿರ್ಧಾರ ಮಾಡಿದರು.
ಈ ಕಾರಣ ಅರಿತು ಫೆ 14 ರಂದು ಮನೆ ಬಿಟ್ಟು ಮಂಡ್ಯಗೆ ಬಂದಿದ್ದ ಚೈತನ್ಯ.
15 ರಂದು ಮಂಡ್ಯದ ದೇವಾಲಯದಲ್ಲಿ ಪ್ರಿಯಕರ ತೇಜಸ್ ಮದುವೆಯಾದರು.16 ರಂದು ಮಂಡ್ಯದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೊಂದಣಿ ಮಾಡಿಸಿಕೊಂಡರು.
18 ಕ್ಕೆ ಮಂಡ್ಯಗೆ ಬಂದಿರುವ ಯುವತಿಯ ಹೆತ್ತವರು ಮಂಡ್ಯದ ಪಶ್ಚಿಮ ಠಾಣೆಯಲ್ಲಿ ರಾಜಿ ಪಂಚಾಯ್ತಿ ಪಿಎಸ್ಐ ವೆಂಕಟೇಶ್ ಮಧ್ಯಸ್ತಿಕೆ ವಹಿಸಿ ಯುವತಿಯನ್ನು ಪೋಷಕರ ಜೊತೆ ಕಳುಹಿಸಿದರು.
ಹೀಗಾಗಿ ಕೇವಲ ಮದುವೆಯಾಗಿ ಮೂರನೇ ದಿನಕ್ಕೆ ಪತಿ ಪತ್ನಿ ದೂರವಾಗಲು ಕಾರಣ ಎಂದುತೇಜಸ್ ದೂರು.
ಸಂಧಾನಕ್ಕೆ ಕರೆದು ಹೆತ್ತವರ ಜೊತೆ ಹುಡುಗಿ ಕಳುಹಿಸಿದ ಪೊಲೀಸರು
ವಾರದೊಳಗೆ ವಾಪಸ್ ಶಾಸ್ತ್ರೋಕ್ತವಾ ಗಿ ಮದುವೆ ಮಾಡಿಸುವುದಾಗಿ ಹುಡುಗಿಯನ್ನು ಪೋಲಿಸರು ಕಳುಹಿಸಿದ್ದರು.
ಇದೀಗ ಗಂಡನ ಜೊತೆ ಮಾತನಾಡಲು ಅವಕಾಶ ನೀಡಿಲ್ಲ. ಹೇಳಿದ್ದ ಟೈಂ ನಿನ್ನೆಗೆ ಮುಕ್ತಾಯಗೊಂಡಿದೆ. ಹೆಂಡತಿಯನ್ನು ಕರೆಸಿಕೊಡಿ ಎಂದು ಮಂಡ್ಯ ಎಸ್ ಪಿಗೆ ದೂರು ನೀಡಲು ಯುವಕ ಮುಂದಾಗಿದ್ದಾನೆ.
ತನ್ನನ್ನು ನಿನ್ನ ಜೊತೆ ಮದ್ವೆ ಮಾಡಲ್ಲ. ಹೇಗಾದ್ರು ಮಾಡಿ ನನ್ನ ವಾಪಸ್ ಕರೆದುಕೊಂಡು ಹೋಗು ಎಂದು ಯುವತಿ ಈಗ ಗೋಳು ಇಡುತ್ತಿದ್ದಾಳೆ.
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ