ನ್ಯೂಯಾರ್ಕ್ ನಲ್ಲಿ ದೀಪಾವಳಿಗಾಗಿ ಶಾಲೆಗಳಿಗೆ ಸಾರ್ವತ್ರಿಕ ರಜೆ ಘೋಷಣೆ

Team Newsnap
1 Min Read
`Diwali' is also a government holiday in America ʻದೀಪಾವಳಿʼಗೆ ಅಮೆರಿಕದಲ್ಲೂ ಸರ್ಕಾರಿ ರಜೆ

2023 ರಿಂದ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ದೀಪಾವಳಿಯನ್ನು ಸಾರ್ವಜನಿಕ ರಜಾದಿನವೆಂದು ಘೋಷಣೆ ಮಾಡಲಾಗಿದೆ.

ಶಾಲೆಗಳಿಗೆ ಈ ದಿನದಂದು ರಜೆ ನೀಡುವುದಾಗಿ ಮೇಯರ್ ಎರಿಕ್ ಆಡಮ್ಸ್ ತಿಳಿಸಿದ್ದಾರೆ.ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂಕುಸಿತ : ರಸ್ತೆ ಬಿರುಕು – ಸಂಚಾರಕ್ಕೆ ತೊಂದರೆ ಇಲ್ಲ 

ಜಗತ್ತಿನಾದ್ಯಂತ ಇರುವ ಭಾರತೀಯರು ಈ ಹಬ್ಬವನ್ನು ಆಚರಿಸುತ್ತಾರೆ. ಆದರೆ ಹೆಚ್ಚು ಭಾರತೀಯರು ಇರುವ ಅಮೆರಿಕದಲ್ಲಿ ದೀಪಾವಳಿಗೆ ಸಾರ್ವಜನಿಕ ರಜೆ ಇರಲಿಲ್ಲ. ರಜೆ ನೀಡಬೇಕೆಂಬ ಜನಪ್ರತಿನಿಧಿಗಳ ವಾದಕ್ಕೆ ಈಗ ಮನ್ನಣೆ ಸಿಕ್ಕಿದೆ.

ನ್ಯೂಯಾರ್ಕ್ ಅಸೆಂಬ್ಲಿ ಸದಸ್ಯೆ ಜೆನಿಫರ್ ರಾಜ್‌ಕುಮಾರ್ ಮತ್ತು ನ್ಯೂಯಾರ್ಕ್ ಸಿಟಿ ಸ್ಕೂಲ್ಸ್ ಚಾನ್ಸೆಲರ್ ಡೇವಿಡ್ ಬ್ಯಾಂಕ್ಸ್ ಜೊತೆಗೂಡಿದ ಆಡಮ್ಸ್, ಈ ವಿಷಯ ತಿಳಿಸಿದ್ದಾರೆ.

ಈ ಹಿಂದೆ ನ್ಯೂಯಾರ್ಕ್‌ನ ಕಾಂಗ್ರೆಸ್​ ಸದಸ್ಯೆ ಕೆರೋಲಿನ್ ಬಿ. ಮೆಲೋನಿ ನೇತೃತ್ವದ ಜನಪ್ರತಿನಿಧಿಗಳ ನಿಯೋಗ ರಜೆ ಕುರಿತ ವಿಧೇಯಕ ಮಂಡಿಸಿತ್ತು. ಐತಿಹಾಸಿಕ ವಿಧೇಯಕಕ್ಕೆ ಭಾರತೀಯ ಅಮೆರಿಕನ್ ಸಂಸದ ರಾಜಾ ಕೃಷ್ಣಮೂರ್ತಿ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದ್ದರು.

Share This Article
Leave a comment