January 29, 2026

Newsnap Kannada

The World at your finger tips!

highway , national , banglore

ಹೊಸ ವರ್ಷಾಚರಣೆ: ದಶಪಥ ಹೆದ್ದಾರಿಯ ರಾಮನಗರ- ಚನ್ನಪಟ್ಟಣ ಬೈಪಾಸ್ ಬಂದ್

Spread the love

ಹೊಸ ವರ್ಷಾಚರಣೆ ಹಾಗೂ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯ ಬೈಪಾಸ್‌ಗಳಲ್ಲಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.

ಬಿಡದಿ , ರಾಮನಗರ ಹಾಗೂ ಚನ್ನಪಟ್ಟಣ ಬೈಪಾಸ್‌ಗಳಲ್ಲಿ ಇಂದು ಸಂಜೆ 5.30ರಿಂದ ನಾಳೆ ಬೆಳಿಗ್ಗೆ 4.30ರವರೆಗೆ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ.ಟಿಕೆಟ್ ಕಚ್ಚಾಟ – KPCC ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಫೈಟಿಂಗ್

ಅಂತೆಯೇ ಕುಂಬಳಗೋಡು ಫ್ಲೈ ಓವರ್ ಕೂಡಾ ಇಂದು ರಾತ್ರಿ 8 ರಿಂದ ಭಾನುವಾರ ಬೆಳಿಗ್ಗೆ 4:30ರವರೆಗೆ ಬಂದ್ ಆಗಿರಲಿದೆ.

ಹಳೇ ಹೆದ್ದಾರಿಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆಅಪಾಘಾತ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ರಾಮನಗರ ಪೊಲೀಸರು ಕ್ರಮವಹಿಸಿದ್ದಾರೆ.

ರಾಮನಗರ ಜಿಲ್ಲಾದ್ಯಂತ ರಾತ್ರಿ 12:30ವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ನೀಡಲಾಗಿದೆ ಸಂಭ್ರಮಾಚರಣೆ ನೆಪದಲ್ಲಿ ಪುಂಡಾಟಿಕೆ ಮಾಡಿದರೆ ಎಫ್‌ಐಆರ್ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ರಾತ್ರಿ ಇಡೀ ಡ್ರಿಂಕ್ ಡ್ರೈವ್ ಬಗ್ಗೆ ನಿಗಾ ವಹಿಸಿ, ತೀವ್ರ ತಪಾಸಣೆ ನಡೆಸಲಾಗುವುದು ಎಂದು ರಾಮನಗರ ಎಸ್ಪಿ ಸಂತೋಷ್ ಬಾಬು ತಿಳಿಸಿದ್ದಾರೆ.

error: Content is protected !!