ಕನ್ನಡಕ್ಕೊಂದು ಹೊಸ ಓಟಿಟಿ ‘ಸಿನೆಮಾ ನೋಡಿ ಡಾಟ್ ಇನ್’

Team Newsnap
1 Min Read

ಕನ್ನಡ ಸಿನೆಮಾಗಳಿಗೇ ಮೀಸಲಾದ ವಿನೂತನ ಓಟಿಟಿ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ‘ಸಿನೆಮಾ ನೋಡಿ ಡಾಟ್ ಇನ್’ ಅನ್ನು ಇಂದು ಕನ್ನಡದ ಖ್ಯಾತ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಲೋಕಾರ್ಪಣೆ ಮಾಡಿದರು.

ಡಾ.ರಾಜ್ ಕುಮಾರ್ ಅಭಿನಯದ ಅತ್ಯುತ್ತಮ ಕನ್ನಡ ಚಿತ್ರ ‘ಕಸ್ತೂರಿ ನಿವಾಸ’ದ ಕಲರ್ ಅವತರಣಿಕೆಯನ್ನು ಮೊದಲ ಬಾರಿಗೆ ಈ ವೇದಿಕೆಯಲ್ಲಿ ಬಿಡುಗಡೆಯಾಗಿರುವುದು ಇನ್ನೊಂದು ವಿಶೇಷ.

ಕನ್ನಡಿಗರಿಗಾಗಿ ಕನ್ನಡಿಗರೇ ಇಂತಹದೊಂದು ಸಾಹಸ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಜಗತ್ತಿನಾದ್ಯಂತ ಇರುವ ಕನ್ನಡ ಚಿತ್ರ ಅಭಿಮಾನಿಗಳು ಅತ್ಯುತ್ತಮ ಗುಣಮಟ್ಟದ ಸಿನೆಮಾಗಳನ್ನು ಈ ವೇದಿಕೆಯಲ್ಲಿ ನೋಡಬಹುದು ಎಂಬುದು ಶ್ಲಾಘನೀಯ ಎಂದು ಶಿವರಾಜ್ ಕುಮಾರ್ ಅಭಿಪ್ರಾಯಪಟ್ಟರು.

ಕೇಂದ್ರ ಸೆನ್ಸಾರ್ ಮಂಡಳಿಯ ನಿವೃತ್ತ ಅಧಿಕಾರಿ ನಾಗೇಂದ್ರ ಸ್ವಾಮಿ ಮತ್ತು ಅವರ ಪತ್ನಿ ಶಾಂತಾ ಕುಮಾರಿ ನೇತೃತ್ವದ ಯುವ ತಂಡ ಈ ಸಾಹಸಕ್ಕೆ ಕೈ ಹಾಕಿದೆ.

ಈಗಾಗಲೇ ನೂರಕ್ಕೂ ಹೆಚ್ಚು ಕನ್ನಡ ಸಿನೆಮಾಗಳು ಈ ತಂಡಕ್ಕೆ ಲಭ್ಯವಾಗಿದ್ದು ಸದ್ಯ ಈ ಫ್ಲಾಟ್ ಫಾರ್ಮ್ ನಲ್ಲಿ 21 ಸಿನೆಮಾಗಳು ಸ್ಟ್ರೀಮಿಂಗ್ ಗೆ ಲಭ್ಯ ಇದೆ ಎಂದು ಸಿನೆಮಾನೋಡಿ ಡಾಟ್.ಇನ್ ನ ನಾಗೇಂದ್ರ ಸ್ವಾಮಿ ಅವರು ತಿಳಿಸಿದ್ದಾರೆ.

ಎಲ್ಲಾ ಸಿನಿಮಾಗಳು ಎಫ್.ಎಚ್.ಡಿ ಗುಣಮಟ್ಟದಲ್ಲಿದ್ದು 5.1 ಸರೌಂಡ್ ಸೌಂಡ್ ನಲ್ಲಿ ಥಿಯೇಟರ್ ನಲ್ಲಿ ನೋಡಿದ ಅನುಭವ ಲಭ್ಯವಾಗಲಿದೆ. ಆಯ್ದ ಹಳೆಯ ಸಿನಿಮಾಗಳನ್ನು ಜಾಹಿರಾತು ಮುಕ್ತವಾಗಿ ಮೂವತ್ತರಿಂದ ಆರವತ್ತು ರೂಪಾಯಿ ಯಲ್ಲಿ ಮನೆಮಂದಿಯೆಲ್ಲ ಸಿನಿಮಾ ವೀಕ್ಷಣೆ ಮಾಡಬಹುದು. ಹೊಸ ಸಿನಿಮಾಗೆ ಮಾತ್ರ ನೂರು ರೂಪಾಯಿಗಳು. ಕನ್ನಡ ಸಿನಿಮಾಗಳನ್ನು ನೋಡಿ ಸಿನಿಮೋದ್ಯಮವನ್ನು ಬೆಳೆಸಿ ಎಂದು ಅವರು ಮನವಿ ಮಾಡಿದ್ದಾರೆ.


cinemanodi.in ವೆಬ್ ಸೈಟ್ ಮತ್ತು cinemanodi ಆಪ್ ಪ್ಲೇಸ್ಟೋರ್ ನಲ್ಲಿ ಲಭ್ಯವಿದ್ದು ಡೌನ್ಲೋಡ್ ಮಾಡಿಕೊಳ್ಳಬಹುದು. ಸಧ್ಯದಲ್ಲಿಯೇ ಆಪ್ ಸ್ಟೋರ್ ಫೈರ್ ಟಿವಿ ಮತ್ತು ರೋಕುಗಳಲ್ಲಿಯೂ ಲಭ್ಯವಾಗಲಿದೆ.

Share This Article
Leave a comment