‘INDIA’ವಿಪಕ್ಷಗಳ ಮೈತ್ರಿಕೂಟದ ಹೊಸ ಹೆಸರು – ಕೈ ಅಧ್ಯಕ್ಷ ಖರ್ಗೆ ಘೋಷಣೆ

Team Newsnap
1 Min Read

ಬೆಂಗಳೂರು:
ಎನ್ ಡಿಎ ಎದುರಿಸಲು ವಿಪಕ್ಷಗಳ ಮಹಾ ಮೈತ್ರಿ ಕೂಟಕ್ಕೆ ‘ INDIA’ ಎಂದು ನಾಮಕರಣ ಮಾಡಲಾಗಿದೆ .

ಮಹಾ ಮೈತ್ರಿಕೂಟ ಸಭೆಯಲ್ಲಿ ಈ ಹೊಸ ಹೆಸರನ್ನು ಫೈನಲ್ ಮಾಡಲಾಗಿದೆ ಎಂದು ವಿಪಕ್ಷಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಭಾರತ ಸಾರ್ವಭೌಮತ್ವ ಕಾಪಾಡುವ ನಿಟ್ಟಿನಲ್ಲಿ ಸಭೆ ಮಾಡಿದ್ದೇವೆ.ಈ ಸಭೆಯಲ್ಲಿ 26 ಪಕ್ಷಗಳ ನಾಯಕರು ಭಾಗಿಯಾಗಿದ್ದಾರೆ ಎಂದರು.

INDIA ಎಂದರೆ ಏನು?

ಇಂಡಿಯನ್ ನ್ಯಾಷನಲ್ ಡೆವಲ್ಮೆಂಟ್, ಇನ್ ಕ್ಲೂಸಿವ್ ಅಲಯನ್ಸ್ ಎಂಬುದಾಗಿ ಇದರ ವಿಸ್ತೃತ ಹೆಸರು.

ಮೈತ್ರಿಕೂಟಕ್ಕೆ ಕಾಂಗ್ರೆಸ್ ನೀಡಿದ ಇಂಡಿಯಾದ ವಿಸ್ತರಣೆ ರೂಪ ಇಂತಿದೆ.!
I – ಭಾರತೀಯ (Indian)
N – ರಾಷ್ಟ್ರೀಯ (National)
D – ಅಭಿವೃದ್ಧಿ (developmental)
I – ಅಂತರ್ಗತ (Inclusive)
A – ಮೈತ್ರಿ (Alliance)

ಮುಂಬೈನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಮಹಾರಾಷ್ಟ್ರ, ಮುಂಬೈನಲ್ಲಿ ಮತ್ತೆ ಸಭೆ ಸೇರುತ್ತೇವೆ. ಪ್ರಜಾಪ್ರಭುತ್ವದ ರಕ್ಷಣೆ, ದೇಶದ ರಕ್ಷಣೆಗೆ ಒಟ್ಟಾಗಿದ್ದೇವೆ ಎಂದರು.

Share This Article
Leave a comment