ಸುಖಬೀರ್ ಬಾದಲ್ ಮತ್ತು ಶರದ್ ಪವಾರ್ ರ ಏಕಸ್ವಾಮ್ಯ ಮುರಿಯಬಲ್ಲ ಹೊಸ ಕೃಷಿ ಮಸೂದೆ

Team Newsnap
2 Min Read

ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಕೃಷಿ ಮಸೂದೆಗಳು ಅಂಗೀಕೃತಗೊಂಡಿವೆ.
ಇನ್ನು ಈ ಮಸೂದೆ ಏಕಸ್ವಾಮ್ಯ ಹೊಂದಿದ ಘಟಾನುಘಟಿಗಳ ಮೇಲೆ ತನ್ನ ಪ್ರಭಾವ ತೋರಿಸದೇ ಇರದು.

ಕೃಷಿಮಸೂದೆಯು ಅನಾಣ್ಯೀಕರಣದ ಮತ್ತೊಂದು ಭಾಗದಂತಿದೆ. ಅನಾಣ್ಯೀಕರಣದಿಂದ (ಹಣ ಚಲಾವಣಾ ರದ್ದತಿ) ಕಪ್ಪು ಹಣ ಹೊಂದಿದ ಎಷ್ಟೋ ಕುಳಗಳು ನಾಶವಾಗಿವೆ. ಅದೇ ರೀತಿ ಕೃಷಿ ಬೆಳೆಗಳ ಮೇಲೆ ಅನಧಿಕೃತ ಏಕಸ್ವಾಮ್ಯ ಪಂಜಾಬ್ ನ ಸುಖಬೀರ ಬಾದಲ್ ಹಾಗೂ ಮಹಾರಾಷ್ಟ್ರದ ಶರದ್ ಪವಾರ್ ರ ಮೇಲೆಯೂ ಈ ಮಸೂದೆಯು ತನ್ನ ಕರಾಳ ಛಾಯೆ ಬೀರಲಿದೆ.

ಪಂಜಾಬ್ ನಲ್ಲಿನ ಸುಖಬೀರ್ ‘ಸುಖಬೀರ್ ಆಗ್ರೋ’ದ ವಾರ್ಷಿಕ ಆದಾಯ ಸರಾಸರಿ ೫೦೦೦ ಕೋಟಿಗಳು. ಈ ಆಗ್ರೋ ಕಂಪನಿಯು ರೈತರ ಹಾಗೂ ಪಂಬಾಬಿನ ಭಾರತೀಯ ಆಹಾರ ನಿಗಮ(ಎಫ್ ಸಿ ಐ)ದ ನಡುವೆ ದಲ್ಲಾಳಿಯ ವ್ಯಾಪಾರವನ್ನು ಮಾಡುತ್ತದೆ. ಈ ಕಾರ್ಯಕ್ಕೆ ಕಂಪನಿಯು ಕೇವಲ ಶೇ ೨.೫ನಷ್ಟು ಕಮೀಷನ್ ಪಡೆಯುತ್ತಿದೆ. ಆದರೆ ಇದರ ವಾರ್ಷಿಕ ಆದಾಯ ೫೦೦೦ ಸಾವಿರ ಕೋಟಿಗಳು ಎಂದರೆ ಯಾರಿಗೆ ತಾನೇ ಸಂಶಯ ಮೂಡುವದಿಲ್ಲ. ಪಂಜಾಬಿನಲ್ಲಿ ಯಾವ ರೈತನೂ ಸಹ ಸುಖಬೀರ್ ಆಗ್ರೋ ಅಂಕಿತವಿಲ್ಲದೇ ಒಂದು ಟನ್ ಗೋಧಿಯನ್ನೂ ಸಹ ಎಫ್ ಸಿ ಐ ಗೆ ಮಾರಾಟ ಮಾಡುವಂತಿಲ್ಲ. ಪಂಜಾಬಿನಲ್ಲಿರುವ ಬಹುಪಾಲು ಗೋದಾಮುಗಳು ಸುಖಬೀರ್ ಆಗ್ರೋ ಅವರ ಅಧೀನದಲ್ಲಿವೆ.

ಇನ್ನು ಮಹಾರಾಷ್ಟ್ರದ ಶರದ್ ಪವಾರ್ ಪುತ್ರಿ ತಮ್ಮ ವ್ಯಾಪಾರದ ಆದಾಯವನ್ನು ೧೦,೦೦೦ ಕೋಟಿ ಎಂದು ತೋರಿಸಿದ್ದಾರೆ. ಶರದ್ ಅವರ ಕುಟುಂಬವು ಪೂರ್ತಿ ಮಹಾರಾಷ್ಟ್ರದ ಈರುಳ್ಳಿ, ಮೆಣಸಿನಕಾಯಿ ಮತ್ತು ದ್ರಾಕ್ಷಿ ವ್ಯಾಪಾರದ ಮೇಲೆ‌ ತನ್ನ ಬಿಗಿ ಹಿಡಿತ ಹೊಂದಿದೆ. ಹೀಗೆ ಪಂಜಾಬ್ ಮತ್ತು ಮಹಾರಾಷ್ಟ್ರದ ಕೃಷಿಯ ಮೇಲೆ ತನ್ನ ಸುಖಬೀರ್ ಹಾಗೂ ಶರದ್ ಪವಾರ್ ಅವರ ಕುಟುಂಬಗಳು ತನ್ನ ಅನ್ಯಾಯಯುತ ಏಕಸ್ವಾಮ್ಯ ಹೊಂದಿವೆ.

ಮೋದಿ ಸರ್ಕಾರದ ಹೊಸ ಕೃಷಿ ಮಸೂದೆಗಳು ಈ ಏಕಸ್ವಾಮ್ಯವನ್ನು ಮುರಿಯುವ ಎಲ್ಲ ಲಕ್ಷಣಗಳನ್ನೂ ಹೊಂದಿವೆ. ಅನ್ಯಾಯದ ಸಾಂಪ್ರದಾಯಿಕ ಬೇರುಗಳನ್ನು ಕಿತ್ತೊಗೆಯುವ ಪ್ರಯತ್ನವನ್ನೂ ಮಾಡುತ್ತವೆ.

ಕೃಷಿ ಮಸೂದೆಗಳನ್ನು ವಿರೋಧಿಸಿರುವ ಅಕಾಲಿದಳ ಮತ್ತು ರಾಷ್ಟ್ರೀಯ‌ ಕಾಂಗ್ರೆಸ್ ಪಕ್ಷಗಳು ಮುಂದಿನ ಚುಣಾವಣೆಯಲ್ಲಿ‌ ಮತಗಳಿಗೋಸ್ಕರ ಜನಗಳ ಬಳಿ ಭಿಕ್ಷೆ ಬೇಡಬೇಕಾಗಬಹುದೇನೋ?

Share This Article
Leave a comment