300 ಸಿಬ್ಬಂದಿಗಳನ್ನು ವಜಾ ಮಾಡಿದ NETFLIX

Team Newsnap
1 Min Read
NETFLIX fired 300 crew #thenewsnap #netflix #latestnews #india

ನೆಟ್‌ಫ್ಲಿಕ್ಸ್‌ ದಿನದಿಂದ ದಿನಕ್ಕೆ ಚಂದಾದಾರರನ್ನ ಕಳೆದುಕೊಳ್ಳುತ್ತಿದೆ. ಇದರಿಂದಾಗಿ ಈಗಾಗಲೇ ನೆಟ್‌ಫ್ಲಿಕ್ಸ್‌ ಇದರ ಬೆಲೆಯನ್ನ ಕೂಡಾ ಕಡಿತಗೊಳಿಸಿದೆ. ಆದರೂ ಚಂದಾದಾರರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿಲ್ಲ.

ನೆಟ್‌ಫ್ಲಿಕ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನವಜಾ ಮಾಡುವ ನಿರ್ಧಾರಕ್ಕೆ ಕಂಪನಿ ಬಂದಿದೆ. ಈಗಾಗಲೇ ಮೊದಲ ಸುತ್ತಿನಲ್ಲಿ ಅಂದರೆ ಮೇ ನಲ್ಲಿ 200 ಉದ್ಯೋಗಿಗಳಿಗೆ ಗೇಟ್ ಪಾಸ್‌ ಕೊಟ್ಟಿತ್ತು. ಈಗ ಮತ್ತೆ 300 ಜನರನ್ನ ವಜಾ ಮಾಡುವುದಕ್ಕೆ ಕಂಪನಿ ಮುಂದಾಗಿದೆ. ಅಂದರೆ ಕಂಪನಿ 4% ಉದ್ಯೋಗಿಗಳನ್ನ ಕಡಿತಗೊಳಿಸುವುದು ಕನ್ಫರ್ಮ್ ಆಗಿದೆ. ಇದನ್ನು ಓದಿ – ಮಂಗಳೂರಿನಲ್ಲಿ ಮೂರು ಮಕ್ಕಳನ್ನು ಕೊಂದ ಪಾಪಿ ಅಪ್ಪ : ಪತ್ನಿ ಜೊತೆ ತಾನೂ ಆತ್ಮಹತ್ಯೆಗೆ ಯತ್ನ

ಕಂಪನಿಯ ಈ ನಿರ್ಧಾರದಿಂದ ಅಮೆರಿನ್ ಉದ್ಯೋಗಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಈ ಹಿಂದೆ ಕೂಡಾ ಅಮೆರಿಕನ್ ಉದ್ಯೋಗಿಗಳೇ ಕೆಲಸವನ್ನ ಕಳೆದುಕೊಂಡಿದ್ದರು, ಈಗ ಮತ್ತೆ ಅವರು ಕೆಲಸ ಕಳೆದುಕೊಳ್ಳುವ ಆತಂಕವನ್ನ ಎದುರಿಸುತ್ತಿದ್ದಾರೆ.

ಹಣದುಬ್ಬರ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ, ಮತ್ತು ಅನೇಕ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ಕೊಡುತ್ತಿರುವ ಪೈಪೋಟಿಯನ್ನ ನೆಟ್‌ಫ್ಲಿಕ್ಸ್‌ ಎದುರಿಸೊಕ್ಕಾಗದೇ ಪರದಾಡ್ತಿದೆ. ಮೊದಲ ತ್ರೈಮಾಸಿಕ ಚಂದಾದಾರರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಇದೇ ರೀತಿ ಮುಂದುವರೆದಿದ್ದೆ ಆದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನಷ್ಟವನ್ನ ಕಂಪನಿ ಅನುಭವಿಸುತ್ತದೆ.

ಇದೆಲ್ಲದಕ್ಕೂ ಪರಿಹಾರವಾಗಿ ಈಗಾಗಲೇ ಅಗ್ಗದ ಜಾಹೀರಾತುಗಳನ್ನ ಬಳಸಿಕೊಳ್ಳುವುದಕ್ಕೆ ಕಂಪನಿ ನಿರ್ಧಾರ ಮಾಡಿದೆ. ಈ ಕುರಿತು ಬೇರೆ, ಬೇರೆ ಕಂಪನಿಗಳ ಜೊತೆ ಮಾತುಕತೆ ನಡೆಸುತ್ತಿದೆ. ಈ ರೀತಿಯಿಂದಾದರೂ ನಷ್ಟವನ್ನ ಭರಿಸುವ ಪ್ರಯತ್ನಕ್ಕೆ ಕಂಪನಿ ಮಂದಾಗಿದೆ.

Share This Article
Leave a comment