ರೈತರ ಸಮಸ್ಯೆಗಳ ಪರಿಹಾರ ಕುರಿತ ಮಾತುಕತೆ ವಿಫಲ – ಹೋರಾಟ ಸ್ಥಗಿತವಿಲ್ಲ

Team Newsnap
1 Min Read

ರೈತ ಸಂಘಟನೆಗಳೊಂದಿಗೆ ಕೇಂದ್ರ ಸರ್ಕಾರ ಇಂದು ರಾಷ್ಟ್ರ ರಾಜಧಾನಿ ಯಲ್ಲಿ ನಡೆಸಿದ ಮಾತುಕತೆ ವಿಫಲ ವಾಗಿದೆ.

ಈ ಪರಿಣಾಮ ನೂತನ ಕೃಷಿ ಕಾಯ್ದೆ ವಿರುದ್ಧ ತೀವ್ರವಾಗಿ ನಡೆಯುತ್ತಿ ರುವ ಹೋರಾಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.

ರೈತ ಪರ ನಾನಾ ಸಂಘಟನೆಗಳು, ಸರ್ಕಾರ ಮತ್ತು ತಜ್ಞರಿರುವ ಸಮಿತಿ ರಚನೆ ಪ್ರಸ್ತಾಪವನ್ನು ರೈತ ಮುಖಂಡರು ತಿರಸ್ಕರಿಸಿದ್ದಾರೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ೩೨ ರೈತ ಸಂಘಟನೆಗಳ ಪ್ರತಿನಿಧಿಗಳ ಜತೆ ದೆಹಲಿಯ ಕೃಷಿ ಭವನದಲ್ಲಿ ನಡೆಸಿದ ಸಂಧಾನ ಸಭೆ ಫಲ ನೀಡಲಿಲ್ಲ. ಇದಕ್ಕೂ ಮುನ್ನ ರೈತ ನಾಯಕರುಗಳಿಗೆ, ಹೊಸ ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಮಾಹಿತಿ ತಿಳಿಸಲಾಗಿತ್ತು.

ರೈತ ಚಳವಳಿಯ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಚಿವರುಗಳಾದ ಅಮಿತ್‌ಶಾ, ರಾಜನಾಥಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಕೇಂದ್ರ ಕೃಷಿ ಸಚಿವರು ಚರ್ಚೆ ನಡೆಸಿದ್ದರು.

ಇದೇ ವೇಳೆ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಅಹಂಕಾರ ಬಿಟ್ಟು ರೈತರ ಸಮಸ್ಯೆ ಕೇಳಬೇಕು ಎಂದು ಸಲಹೆ ನೀಡಿದ್ದಾರೆ.

ರೈತರ ಮೇಲೆ ದೌರ್ಜನ್ಯವೆಸಗುವ ಬದಲು ನ್ಯಾಯ ಒದಗಿಸಿದರೆ ಅವರ ಋಣ ತೀರಿಸಲು ಸಾಧ್ಯವಾದಂತೆ ಎಂದು ಕಿವಿಮಾತು ಹೇಳಿದ್ದಾರೆ.

Share This Article
Leave a comment