ಹೆಚ್ ಡಿ ಕೋಟೆ ಬಳಿ : ನಾಲೆಗೆ ಬಿದ್ದ ಪುತ್ರಿ ರಕ್ಷಣೆಗೆ ಹೋದ ಅಪ್ಪ – ಅಮ್ಮನೂ ದುರಂತ ಸಾವು

Team Newsnap
1 Min Read

ಹೆಚ್ ಡಿ ಕೋಟೆ :

ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಣೆ ಮಾಡಲು ಹೋದ ಅಪ್ಪ – ಅಮ್ಮನೂ ಸಹ ದುರಂತ ಸಾವು ಕಂಡ ಘಟನೆ ಹೆಚ್ ಡಿ ಕೋಟೆ ತಾಲೂಕು ಚಂಗೌಡನಹಳ್ಳಿ ಬಳಿ ಜರುಗಿದೆ.

ಶಾಹಿರಾ ಬಾನು (20) ತಂದೆ ಮೊಹಮ್ಮದ್ ಕಪೀಲ್ , ತಾಯಿ ಶಹಾರಿ ಬಾನು ಸಾವನ್ನಪ್ಪಿದವರು.

ಮೃತರೆಲ್ಲರೂ ಬೆಂಗಳೂರಿನ ಜಯನಗರದವರು. ಅಜ್ಜಿ ತಿಥಿ ಕಾರ್ಯ ಮುಗಿಸಿ ನಾಲೆಗೆ ಕೈ – ಕಾಲು ತೊಳೆದುಕೊಂಡು ಬರಲು ಮಗಳು ಹೋಗಿದ್ದಾಳೆ. ಆಗ ಆಕೆ ಕಾಲು ಜಾರಿ ಬಿದ್ದಿದ್ದಾಳೆ. ಅವಳನ್ನು ರಕ್ಷಣೆ ಮಾಡಲು ಹೋದ ಅಪ್ಪ – ಅಮ್ಮ ಕೂಡ ಜಲಸಮಾಧಿಯಾಗಿದ್ದಾರೆ.

ನುಗು ಜಲಾಶಯದ ಬಲ ದಂಡೆ ನಾಲೆಯಲ್ಲಿ ಈ ಘಟನೆ ಜರುಗಿದೆ. ಸರಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು
ತನಿಖೆ ನಡೆಸುತ್ತಿದ್ದಾರೆ.

Share This Article
Leave a comment