December 23, 2024

Newsnap Kannada

The World at your finger tips!

navy

ನೌಕಾಪಡೆಯ ನೂತನ ನೌಕಸೇನಾಧಿಪತಿಯಾಗಿ ಆರ್. ಹರಿ ಕುಮಾರ್ ಅಧಿಕಾರ ಸ್ವೀಕಾರ

Spread the love

ಭಾರತೀಯ ನೌಕಾಪಡೆಯ ನೂತನ ನೌಕಸೇನಾಧಿಪತಿಯಾಗಿ ವೈಸ್ ಅಡ್ಮಿರಲ್ ಆರ್ ಹರಿ ಕುಮಾರ್ ಮಂಗಳವಾರ ಅಧಿಕಾರ ಸ್ವೀಕರಿಸಿದರು

ಆರ್ ಹರಿ ಕುಮಾರ್ ಭಾರತೀಯ ನೌಕಾಪಡೆಯ (Indian Navy) ಅಡ್ಮಿರಲ್ ಕರಂಬಿರ್ ಸಿಂಗ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ.

ಈ ಮುನ್ನ ಆರ್ ಹರಿ ಕುಮಾರ್ ಪಶ್ಚಿಮ ನೇವಲ್ ಕಮಾಂಡ್ ಕಮಾಂಡಿಂಗ್ ಇನ್ ಚೀಫ್ (ಎಫ್‍ಒಸಿ-ಇನ್-ಸಿ) ಫ್ಲಾಗ್ ಆಫೀಸರ್ ಆಗಿದ್ದರು. ಅಲ್ಲದೇ ಐಎನ್‍ಎಸ್ ವಿಕ್ರಮಾದಿತ್ಯದ ಸಾಗರೋತ್ತರ ಸಮಿತಿಯ ಮುಖ್ಯಸ್ಥರಾಗಿದ್ದರು ಮತ್ತು ಗೋವಾದ ನೌಕಾ ಯುದ್ಧ ಕಾಲೇಜಿನ ಕಮಾಂಡೆಂಟ್ ಆಗಿ ನೇಮಕಗೊಂಡ ಮೊದಲ ಫ್ಲ್ಯಾಗ್ ಆಫೀಸರ್ ಕೂಡ ಆಗಿದ್ದರು.

ಆರ್ ಹರಿ ಕುಮಾರ್ ಅವರು 1962ರ ಏಪ್ರಿಲ್ 12ರಂದು ಜನಿಸಿದರು. 1981ರ ಡಿಸೆಂಬರ್ ನಲ್ಲಿ ಎ-ಸ್ಕ್ವಾಡ್ರನ್, 61 ಕೋರ್ಸ್ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಿಂದ ಪದವಿ ಪಡೆದರು ಮತ್ತು 1983ರ ಜನವರಿ 1ರಂದು ನೌಕಾಪಡೆಯ ಕಾರ್ಯನಿರ್ವಾಹಕ ಶಾಖೆಗೆ ನೇಮಕಗೊಂಡರು.

ಸುಮಾರು 39 ವರ್ಷಗಳ ವೃತ್ತಿ ಜೀವನದಲ್ಲಿ ಹರಿ ಕುಮಾರ್ ಅವರು ವಿವಿಧ ಕಮಾಂಡರ್, ಸಿಬ್ಬಂದಿ ಮತ್ತು ಬೋಧನಾ ನೇಮಕಾತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹರಿ ಕುಮಾರ್ ಅವರಿಗೆ ಸಮುದ್ರ ಕಮಾಂಡ್‍ನಲ್ಲಿ ಕೋಸ್ಟ್ ಗಾರ್ಡ್ ಶಿಪ್ ಸಿ-01, ಐಎನ್‍ಎಸ್ ನಿಶಾಂಕ್, ಮಿಸೈಲ್ ಕಾರ್ವೆಟ್, ಐಎನ್‍ಎಸ್ ಕೋರಾ ಮತ್ತು ಗೈಡೆಡ್ ಮಿಸೈಲ್ ಡೆಸ್ಟ್ರಾಯರ್ ಐಎನ್‍ಎಸ್ ರಣವೀರ್ ಸೇರಿವೆ. ವೆಸ್ಟ್ರೆರ್ನ್ ಫ್ಲೀಟ್‍ನ ಫ್ಲೀಟ್ ಆಪರೇಷನ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಯುಎಸ್‍ನ ನೇವಲ್ ವಾರ್ ಕಾಲೇಜು, ಮಧ್ಯಪ್ರದೇಶದ ಆರ್ಮಿ ವಾರ್ ಕಾಲೇಜು ಮತ್ತು ಯುಕೆಯ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‍ನಲ್ಲಿ ಕೋರ್ಸ್‍ಗಳನ್ನು ಮಾಡಿದ್ದಾರೆ. ಆರ್.ಹರಿ ಕುಮಾರ್ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕವನ್ನು ಲಭಿಸಿದೆ.

Copyright © All rights reserved Newsnap | Newsever by AF themes.
error: Content is protected !!